ಮೈಸೂರು: ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಐದು ಆನೆಗಳು ಸೇಫ್ ಆಗಿ ಗುರುವಾರ ಸಂಜೆಯ ವೇಳೆ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದಿಳಿದಿವೆ.
ಸೇಫ್ ಆಗಿ ಅರಣ್ಯಭವನಕ್ಕೆ ಬಂದಿಳಿದ ಕ್ಯಾಪ್ಟನ್ ಅರ್ಜುನ ಆ್ಯಂಡ್ ಟೀಂ - ಅರ್ಜುನ ಆ್ಯಂಡ್ ಟೀಂ
ನಾಡಹಬ್ಬ ದಸರಾ ಹಿನ್ನಲೆ ಮೊದಲನೇ ಹಂತದಲ್ಲಿ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಆನೆಗಳು ಗುರುವಾರ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದಿಳಿದಿವೆ.
ಗಜಪಡೆ
ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿ ಗಜಪಡೆ ಮೊದಲನೇ ಹಂತದ ಆನೆಗಳಾದ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರನಿಗೆ ಶಾಸ್ತ್ರೋಸ್ತ್ರವಾಗಿ ಪೂಜೆ ಸಲ್ಲಿಸಿ, ಅಲ್ಲಿಂದ ಲಾರಿಗಳ ಮೂಲಕ ಮೈಸೂರಿನ ಅರಣ್ಯಭವನಕ್ಕೆ ಕಳುಹಿಸಲಾಯಿತು.
ಆನೆಗಳು ಅರಣ್ಯಭವನಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯರು ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದು ಬಂದರು. ಆ.26ರಂದು ಆನೆಗಳನ್ನ ಅರಮನೆಗೆ ಬರಮಾಡಿಕೊಳ್ಳಲಾಗುವುದು. ಅರಣ್ಯಭವನಕ್ಕೆ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.