ಮೈಸೂರು:ಇಲ್ಲೊಂದು ಆನೆ ಇತ್ತು. ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಿತ್ತು. ಅದು ಈಗ ಎಲ್ಲಿ ಹೋಯ್ತು ಅಂದ್ರೆ ಗೊತ್ತಿಲ್ಲ ಅಂತಾರೆ ಅಲ್ಲಿನ ಮಂದಿ. ಕಳೆದ ಎರಡು ವರ್ಷದಿಂದ ಇಲ್ಲಿ ಕಾಣುತ್ತಿಲ್ಲ. ಎಲ್ಲಿಗೆ ಹೋಯ್ತು, ಮತ್ತೆ ಇಲ್ಲಿಗೆ ಯಾವಾಗ ಬರುತ್ತದೆ ಆ ಆನೆ?
ಹೌದು, ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನದಲ್ಲಿದ್ದ ಆನೆ ಕಳೆದ ಎರಡು ವರ್ಷಗಳಿಂದ ಕಾಣುತ್ತಿಲ್ಲ. ಈ ಹಿಂದೆ ಕಾಲು ನೋವಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆನೆ ಶಿಬಿರಕ್ಕೆ ಆ ಹೆಣ್ಣು ಆನೆ 'ಲಕ್ಷ್ಮಿ'ಯನ್ನು ಕರೆದುಕೊಂಡು ಹೋಗಲಾಗಿತ್ತು.
ನಂಜನಗೂಡಿನ ಆ ಲಕ್ಷ್ಮಿ ಇನ್ನು ವಾಪಸ್ ಬಂದಿಲ್ಲ ಆದರೆ ಎರಡು ವರ್ಷಗಳಿಂದ ಆನೆಯ ಕಾಲಿಗೆ ಚಿಕಿತ್ಸೆ ಆಗಿಲ್ಲವೇ? ಅಥವಾ ಆನೆಯನ್ನು ಇಲ್ಲಿಗೆ ಕಳುಹಿಸಿದಿಲ್ಲವೇ ಎಂಬ ಹಲವಾರು ಪ್ರಶ್ನೆಗಳು ದೇವಾಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಮೂಡುತ್ತಿವೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಹಲವಾರು ಮಂದಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದ ಆನೆ ಇದೀಗ ಅಲ್ಲಿಂದ ಮರೆಯಾಗಿದೆ. ಆ ಲಕ್ಷ್ಮಿ ಹೆಸರಿನ ದೇವಸ್ಥಾನದ ಆನೆ ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಿತ್ತು. ಆದರೀಗ ಎರಡು ವರ್ಷಗಳಿಂದ ಆನೆ ನೋಡುವ ಸೌಭಗ್ಯ ಭಕ್ತರಿಗೆ ಇಲ್ಲದಾಗಿದೆ. ಇನ್ನು ಮೈಸೂರು ಜಿಲ್ಲೆಯಾದ್ಯಂತ ಯಾವ ದೇವಸ್ಥಾನಕ್ಕೂ ಆನೆ ಸಾಕುವ ಅನುಮತಿ ನೀಡಿರಲಿಲ್ಲ. ಆದ್ರೆ ನಂಜುಂಡೇಶ್ವರ ದೇವಸ್ಥಾನಕ್ಕೆ ಮಾತ್ರ ಆನೆ ನೀಡಲಾಗಿತ್ತು.