ಮೈಸೂರು:ತಿರುಪತಿಯಲ್ಲಿ ತಯಾರಾಗುವ ಲಾಡುಗೆ ನಂದಿನಿ ತುಪ್ಪವನ್ನು ಕಳುಹಿಸುತ್ತಾರೆ. ಅದು ಕೂಡ ನಕಲಿ ತುಪ್ಪ ಇರಬಹುದು ಎಂದು ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣಗೌಡ ಸುದ್ದಿಗೋಷ್ಠಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗೆ ಕೆಎಂಎಫ್ ಬ್ರಾಂಡ್‌ಗಳ ಮೇಲೆ ಅನುಮಾನವಿದೆ. ನಂದಿನಿ ಮಿಲ್ಕ್ ಪಾರ್ಲರ್‌ಗಳಲ್ಲಿ ಹಾಲಿನ ಉತ್ಪನ್ನಗಳನ್ನಷ್ಟೇ ಮಾರಾಟ ಮಾಡಬೇಕು. ಆದರೆ ಟೀ, ಬಿಸ್ಕೇಟ್ ಸೇರಿದಂತೆ ಬೇರೆ ಉತ್ಪನ್ನಗಳನ್ನ ಮಾರುತ್ತಾರೆ. ಕೆಎಂಎಫ್‌ನ ಮೈಸೂರು ಪಾಕ್‌ಗೆ ಬೇಡಿಕೆ ಹೆಚ್ಚಿಸಿಕೊಳ್ಳಲು ಮಹಾಲಕ್ಷ್ಮೀ ಸ್ವೀಟ್ಸ್ ವಿರುದ್ಧ ಆರೋಪ ಮಾಡಲಾಗಿದೆ ಎಂದು ಆರೋಪಿಸಿದರು.
ನಕಲಿ ಸತ್ಯಾಸತ್ಯತೆ ಹೊರಗೆ ಬರುವವರೆಗೂ ರಾಜಾದ್ಯಂತ ಕೆಎಂಎಫ್ ಹಾಲಿನ ಉತ್ಪನ್ನಗಳನ್ನ ಖರೀದಿ ಮಾಡದಂತೆ ಕರೆ ನೀಡುತ್ತೇವೆ. ನಕಲಿ ತುಪ್ಪ ತಯಾರಿಕೆಯಲ್ಲಿ ಮೈಮುಲ್ ಕೆಲ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರ ಸಹಕಾರವಿಲ್ಲದೇ ತುಪ್ಪದ ಪ್ಯಾಕಿಂಗ್ ಕವರ್‌ಗಳು ಸಿಗಲು ಸಾಧ್ಯವಿಲ್ಲ ಎಂದು ಆಪಾದಿಸಿದರು. ನಮಗೆ ನಂದಿನಿ ತುಪ್ಪ ಖರೀದಿ ಮಾಡಬೇಕ, ಬೇಡವೇ ಎಂಬ ಚಿಂತೆ ಶುರುವಾಗಿದೆ. ತಿರುಪತಿ ಲಡ್ಡು ತಯಾರಿಕೆಗೆ ಹೋಗುವ ನಂದಿನಿ ತುಪ್ಪ ಅಸಲಿಯೋ ನಕಲಿಯೋ ಗೊತ್ತಿಲ್ಲ ಎಂದರು.
ನಾನು ಇನ್ಮುಂದೆ ನಂದಿನಿ ತುಪ್ಪ ಖರೀದಿಸಲ್ಲ:ನಾವು ಇದುವರೆಗೂ ನಂದಿನಿ ತುಪ್ಪ ಖರೀದಿಸಿ ಸ್ವೀಟ್ಸ್ ತಯಾರಿಸುತ್ತಿದ್ದೆವು. ಆದರೆ, ಮೈಮುಲ್ ಎಂಡಿ ವಿಜಯ್ ಕುಮಾರ್ ನಕಲಿ ತುಪ್ಪ ಮಹಾಲಕ್ಷ್ಮಿ ಸ್ವೀಟ್ಸ್‌ಗೆ ಹೋಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಇದರಿಂದ ನಮ್ಮಕಂಪನಿ ಬ್ರಾಂಡ್ ಹಾಳಾಗುತ್ತಿದೆ. ನಾನು ಇನ್ಮುಂದೆ ನಂದಿನಿಗಿಂತ ಅಪ್ಪರ್ ಬ್ರಾಂಡ್ ತುಪ್ಪವನ್ನ ಬೇರೆ ಕಡೆ ಖರೀದಿಸುತ್ತೇವೆ. ಗುಜಾರಾತ್, ಜೈಪುರದಿಂದ ಈಗಾಗಲೇ ತುಪ್ಪದ ಶಾಂಪಲ್ಸ್ ತರಿಸಿದ್ದೇವೆ. ನಾನು ನನ್ನ ಬ್ರಾಂಡ್ ಉಳಿಸಿಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕ ಶಿವಕುಮಾರ್ ಹೇಳಿದರು.