ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಅಪ್ರಮಾಣಿಕತೆ ಮತ್ತು ಅಭದ್ರತೆ ಕಾಡುತ್ತಿದೆ: ಸಿಎಂ ಬೊಮ್ಮಾಯಿ ಲೇವಡಿ - Election campaign in Varuna constituency

ಮೊದಲು ತಪ್ಪು ಮಾಡಿ ಅದಕ್ಕೆ ಮತ್ತೇ ಓವರ್ ರಿಯಾಕ್ಟ್ ಮಾಡುವುದನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ​

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : May 5, 2023, 3:41 PM IST

ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಮೈಸೂರು :ಕಾಂಗ್ರೆಸ್ ಪಕ್ಷಕ್ಕೆ ಅಭದ್ರತೆ ಕಾಡುತ್ತಿದ್ದು, ಮೊದಲು ತಪ್ಪು ಮಾಡುವುದು, ಮತ್ತೇ ಓವರ್ ರಿಯಾಕ್ಟ್ ಮಾಡುವುದು ಎರಡನ್ನೂ ಕಾಂಗ್ರೆಸ್​​ನವರು ಮಾಡುತ್ತಿದ್ದಾರೆ. ಕಾಂಗ್ರೆಸ್ ನವರ ಮಾತಿನಲ್ಲಿ ಯಾವುದೇ ಸಮನ್ವಯತೆ ಇಲ್ಲ. ಅವರಲ್ಲಿ ಅಪ್ರಮಾಣಿಕತೆ ಮತ್ತು ಅಭದ್ರತೆ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಬೊಮ್ಮಯಿ, ಬಾರಿ ಕುತೂಹಲ ಕೆರಳಿಸಿರುವ ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ವರುಣಾ ಕ್ಷೇತ್ರ ಆರಂಭದ ದಿನದಿಂದ ಉತ್ತಮವಾಗಿದ್ದು, ಎಲ್ಲ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸುವ ಆತ್ಮವಿಶ್ವಾಸ ಇದೆ. ಆದರೆ, ಕಾಂಗ್ರೆಸ್ ನವರಿಗೆ ಅಭದ್ರತೆ ಹೆಚ್ಚಾಗಿದ್ದು. ಸಿದ್ದರಾಮಯ್ಯ ನಿನ್ನೆಯಿಂದ ವರುಣಾದಲ್ಲಿ ಸ್ಟಾರ್ ಗಳ ಜೊತೆ ಕ್ಯಾಂಪೇನ್ ಮಾಡುತ್ತಿದ್ದಾರೆ. ಮೊದಲು ವರುಣಾದಲ್ಲಿ ಒಂದು ದಿನ ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಈಗ ಸ್ಟಾರ್ ಗಳ ಜೊತೆ ದಿನವಿಡೀ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ವರುಣಾದಲ್ಲಿ ಬಿಜೆಪಿ ಸ್ಥಿತಿ ಉತ್ತಮವಾಗಿದೆ ಎಂಬುದು ಇದರಿಂದಲೇ ವ್ಯಕ್ತವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಟಾರ್ ಗಳ ಜೊತೆ ನಡೆಸುತ್ತಿರುವ ಪ್ರಚಾರದ ಬಗ್ಗೆ ವ್ಯಂಗ್ಯವಾಡಿದರು.

ಇದನ್ನೂ ಓದಿ :ನೀಟ್ ಪರೀಕ್ಷೆಗಾಗಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

ಬಜರಂಗದಳ ನಿಷೇಧ ವಿಚಾರ :ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇದದ ಬಗ್ಗೆ ಪ್ರತಿಕ್ರಿಯೆ ನೀಡಿ, ನಂತರ ಆ ಹೇಳಿಕೆಯ ಬಗ್ಗೆ ಓವರ್ ಕಾಂಗ್ರೆಸ್​ ರಿಯಾಕ್ಟ್ ಮಾಡುತ್ತಿದ್ದು. ಇದರಿಂದಲೇ ಗೊತ್ತಾಗುತ್ತದೆ ಕಾಂಗ್ರೆಸ್​ಗೆ ಎಷ್ಟು ಅಭದ್ರತೆ ಕಾಡುತ್ತಿದೆ. ಅದನ್ನು ತಡೆಯಲು ಓವರ್ ರಿಯಾಕ್ಟ್ ಮಾಡುತ್ತಿದ್ದು, ಅವರ ಹೇಳಿಕೆಗಳಲ್ಲಿ ಸಮನ್ವಯತೆ ಇಲ್ಲ, ಲಿಂಗಾಯತ ವಿಚಾರದಲ್ಲೂ ಇವರು ಅದೇ ಮಾಡುತ್ತಿದ್ದಾರೆ. ಈಗ ಪ್ರತಿ ಗ್ರಾಮದಲ್ಲೂ ಹನುಮ ದೇವಾಲಯ ನಿರ್ಮಾಣ ಮಾಡುತ್ತೇವೆ. ಹಾಗೂ ಅಭಿವೃದ್ಧಿ ಮಂಡಳಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಭರವಸೆ ನೀಡುತ್ತಿದ್ದಾರೆ. ಮೊದಲು ಡ್ಯಾಮೇಜ್ ಮಾಡುತ್ತಾರೆ, ನಂತರ ಅದನ್ನು ಸರಿ ಮಾಡಲು ಬೇರೆ ಏನೋ ಹೇಳುತ್ತಾರೆ. ಈಗ ಎಲ್ಲರ ಕೈಯಲ್ಲಿ ಮೊಬೈಲ್ ಇದೆ, ಎಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸ್ಪಷ್ಟೀಕರಣಕ್ಕೆ ಬೆಲೆ ಇಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ :ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ

ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ :ಈಗಾಗಲೇ ನಡೆಸಿರುವ ಚುನಾವಣೆಸಮೀಕ್ಷೆಗಳು ಹೇಳುವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರಧಾನಿಯವರು ಪ್ರಚಾರಕ್ಕೆ ಬಂದಿರುವುದರಿಂದ ಗೆಲುವಿನ ಸಂಖ್ಯೆ ಸಮೀಕ್ಷೆಗಳಿಗಿಂತ ಜಾಸ್ತಿ ಆಗಲಿದೆ, ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದಿಂದ ಕಾಂಗ್ರೆಸ್​ ಪಕ್ಷಕ್ಕೆ ಹಾನಿಯಿಲ್ಲ: ಮಧು ಬಂಗಾರಪ್ಪ

ABOUT THE AUTHOR

...view details