ಕರ್ನಾಟಕ

karnataka

ETV Bharat / state

Hunsur murder case: ಹುಣಸೂರಿನ ಜೋಡಿ ಕೊಲೆ ಪ್ರಕರಣ.. ಬಾಲಾಪರಾಧಿ ಸೇರಿ ಮೂವರ ಬಂಧನ - ಹುಣಸೂರಿನ ಸಾಮಿಲ್​ನಲ್ಲಿ ಕೊಲೆ

ಮೈಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Hunsur couple murder
Hunsur pair murder

By

Published : Jun 26, 2023, 1:21 PM IST

ಮೈಸೂರು:ಹುಣಸೂರಿನ ಸಾಮಿಲ್ ಒಂದರಲ್ಲಿ ಚಿಲ್ಲರೆ ಕಾಸಿಗಾಗಿ ನಡೆದ ಡಬಲ್ ಮರ್ಡರ್ ಕೇಸ್​ನಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಹುಣಸೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಪರಸಯ್ಯನ ಛತ್ರದ ಬಳಿಯ ಸಾಮಿಲ್ ಒಂದರಲ್ಲಿ ವಾಚ್ ಮ್ಯಾನ್ ವೆಂಕಟೇಶ್ (70) ಹಾಗೂ ಷಣ್ಮುಖ ಎಂಬುವವರು ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಬಂಧಿಸಿದ್ದು, ಆರೋಪಿಗಳಾದ ಅಭಿಷೇಕ್, ತೌಸಿಫ್(30) ಹಾಗೂ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ.

ಸಿಸಿಟಿವಿಯಲ್ಲಿ ಕೊಲೆ ಘಟನೆ ಸೆರೆ: ಅಭಿಷೇಕ್, ತೌಸಿಫ್, ಬಾಲಕನೊಬ್ಬ ಸೇರಿ ಸಾಮಿಲ್​ನ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಪೊಲೀಸರಿಗೆ ಪ್ರಮುಖ ಸುಳಿವು ನೀಡಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ಕಸ್ಟಡಿಗೆ ಒಪ್ಪಿಸಲಾಗಿದೆ.

ಅಭಿಷೇಕ್​ಗೆ ಸಹಾಯ ಮಾಡಿದ ಆರೋಪಿಯಾದ ತೌಸಿಫ್ ಅಹಮದ್ ಖಾನ್(30) ಮಾದಕ ವ್ಯಸನಿಯಾಗಿದ್ದು, ಮಾದಕ ವಸ್ತುಗಳ ಮಾರಾಟಗಾರನು ಸಹ ಆಗಿದ್ದ. ಘಟನೆ ನಡೆದ ಹಿಂದಿನ ದಿನ ತೌಸಿಫ್ ಮೈಸೂರಿಗೆ ಆಗಮಿಸಿ ತಾಯಿಯನ್ನು ನೋಡಿ ವಾಪಸಾಗಿದ್ದ.

ಇದನ್ನೂ ಓದಿ:ಮೈಸೂರು: ಹುಣಸೂರಲ್ಲಿ ಮಧ್ಯರಾತ್ರಿ ಜೋಡಿ ಕೊಲೆ..

ಚಿಲ್ಲರೆ ಕಾಸಿಗಾಗಿ ಕೊಲೆ :ಸಾಮಿಲ್​ನ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೇವಲ ಚಿಲ್ಲರೆ ಕಾಸಿಗಾಗಿ ಅಭಿಷೇಕ್, ತೌಸಿಫ್ ಬಾಲಾಪರಾಧಿ ಸೇರಿ ಕೊಲೆ ಮಾಡಿದ್ದಾರೆ. ಮಾದಕ ವಸ್ತುಗಳ ವ್ಯಸನಿಗಳಾಗಳಾಗಿದ್ದ ಅವರು ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೊಲೆ ಮಾಡಿ, ಅವರ ಬಳಿ ಇದ್ದ 485 ರೂಪಾಯಿಗಳನ್ನು ದೋಚಿಕೊಂಡು ಹೋಗಿದ್ದರು.

ಕಬ್ಬಿಣದ ರ್ಯಾಡ್​ನಿಂದ ಹೊಡೆದು ಕೊಲೆ :ಬೋಟಿ ಬಜಾರ್​ನ ಸಾಮಿಲ್​ಗೆ ಈ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ಹಾಗೂ ತೌಸಿಫ್, ಬಾಲಾಪರಾಧಿ ತೆರಳಿದ್ದು, ಅಲ್ಲಿ ಅಭಿಷೇಕ್ ಎಂಬಾತ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಇಬ್ಬರನ್ನೂ ರ್ಯಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ‌ ಎಂದು ತಿಳಿದು ಬಂದಿದೆ.

ಹುಣಸೂರಿನ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಪ್ರಮುಖ ಆರೋಪಿ ಅಭಿಷೇಕ್ ಹಾಗೂ ಆತ‌ನಿಗೆ ಸಹಾಯ ಮಾಡಿದ ತೌಸಿಫ್, (30) ಬಾಲಾಪರಾಧಿಯೊಬ್ಬನನ್ನು ಬಂಧಿಸಿದ್ದು. ಬಾಲಾಪರಾಧಿಯನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ. ಅಭಿಷೇಕ್ ಹಾಗೂ ತೌಸಿಫ್​ನನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಕೊಲೆ ಬೆಳಕಿಗೆ ಬಂದಿದ್ದು ಹೇಗೆ?:ಪ್ರತಿದಿನ ಸಾಮಿಲ್ ಒಳಗೆ ಮಲಗುತ್ತಿದ್ದ ವೆಂಕಟೇಶ್ ಬೆಳಗ್ಗೆ ಬೇಗ ಎದ್ದು ಕೆಲಸದಲ್ಲಿ ನಿರತರಾಗುತ್ತಿದ್ದರು. ಆದರೆ ಕೊಲೆ ನಡೆದ ಮಾರನೆ ದಿನ ಬೆಳಗ್ಗೆ 7 ಗಂಟೆಯಾದರು ಹೊರಗೆ ಬಂದಿರಲಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಯವರು ಅನುಮಾಗೊಂಡು ಸಾಮಿಲ್​ನ ಮಾಲೀಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಮಾಲೀಕರು ಸಾಮಿಲ್​​ಗೆ ಬಂದು ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಹುಣಸೂರಿನ ಶಾಮಿಲ್​ನಲ್ಲಿ ಜೋಡಿ ಕೊಲೆ ಪ್ರಕರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details