ಮೈಸೂರು:ವಾಹನ ತಪಾಸಣೆ ವೇಳೆ ನಿಂತಿದ್ದ ಪೊಲೀಸ್ ಜೀಪ್ ಮೇಲೆ ಎಂ ಸ್ಯಾಂಡ್ ತುಂಬಿದ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಜೀಪ್ ಚಾಲಕರಾಗಿದ್ದ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಂಜನಗೂಡಿನ ಮುದ್ದಹಳ್ಳಿ ಗೇಟ್ ಬಳಿ ನಡೆದಿದೆ.
ವಾಹನ ತಪಾಸಣೆ ವೇಳೆ ಟಿಪ್ಪರ್ ಮಗುಚಿ ಹೆಡ್ ಕಾನ್ಸ್ಟೇಬಲ್ ಸಾವು ಸಿದ್ದರಾಜನಾಯಕ (35) ಮೃತಪಟ್ಟ ಪೊಲೀಸ್ ಸಿಬ್ಬಂದಿ. ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗೇಟ್ ಬಳಿ ಇಂಟರ್ಸೆಪ್ಟರ್ ನಿಲ್ಲಿಸಿಕೊಂಡು ವಾಹನ ತಪಾಸಣೆ ಮಾಡುತ್ತಿದ್ದಾಗ ಮರಳು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ವಾಹನ ನಿಲ್ಲಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ಇಂಟರ್ಸೆಪ್ಟರ್ ವಾಹನದ ಮೇಲೆ ಪಲ್ಟಿಯಾಗಿದೆ.
ವಾಹನ ತಪಾಸಣೆ ವೇಳೆ ಟಿಪ್ಪರ್ ಮಗುಚಿ ಹೆಡ್ ಕಾನ್ಸ್ಟೇಬಲ್ ಸಾವು ಈ ಸಂದರ್ಭದಲ್ಲಿ ಮರಳಿನಡಿ ಸಿದ್ದರಾಜನಾಯಕ ಸಿಲುಕಿದ್ದರು. ಕೂಡಲೇ ಸ್ಥಳೀಯರು ಎಂ ಸ್ಯಾಂಡ್ ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಸಿದ್ದರಾಜನಾಯಕ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಜೆಸಿಬಿ ಮೂಲಕ ಎಂ ಸ್ಯಾಂಡ್ ತೆರವುಗೊಳಿಸಿ, ಟಿಪ್ಪರ್ ಪಕ್ಕಕ್ಕೆ ನಿಲ್ಲಿಸಲಾಯಿತು. ಬಳಿಕ ಸಿದ್ದರಾಜನಾಯಕರ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಅಪಘಾತದಲ್ಲಿ ಪೊಲೀಸ್ ವಾಹನ ಜಖಂಗೊಂಡಿದೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.