ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿಗೆ ಬರುವ ದಿನವೇ ಕಾಂಗ್ರೆಸ್ ಮುಖಂಡರು ಪೇಸಿಎಂ ಅಭಿಯಾನ ಆರಂಭಿಸಿದ್ದಾರೆ.
ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಜೆ.ಕೆ ಮೈದಾನದ ಕಾಂಪೌಂಡ್ಗೆ ಪೇಸಿಎಂ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದರು. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ನೇತೃತ್ವದಲ್ಲಿ ಪೇಸಿಎಂ ಅಭಿಯಾನ ಆರಂಭಿಸಿದ್ದು, ನಾಳೆಯಿಂದ ನಗರಾದ್ಯಂತ ಅಭಿಯಾನ ಮಾಡುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.
ಮೈಸೂರಿನಲ್ಲಿಯೂ ಪೇಸಿಎಂ ಅಭಿಯಾನ ಪ್ರಾರಂಭಿಸಿದ ಕಾಂಗ್ರೆಸ್ ಇದನ್ನೂ ಓದಿ:'PAYCM' ಪೋಸ್ಟರ್ ಮೂಲಕ ಬೊಮ್ಮಾಯಿ ಸರ್ಕಾರದ ಲೇವಡಿ ಮಾಡಿದ ಕಾಂಗ್ರೆಸ್!
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ. 40ರಷ್ಟು ಕಮಿಷನ್ ಇಲ್ಲದೆ ಕೆಲಸ ಆಗುವುದೇ ಇಲ್ಲ ಎಂದು ಆರೋಪಿಸಿ ನಿರಂತರ ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷ ಈ ಮೂಲಕ ಇನ್ನೊಂದು ಹಂತದ ಹೋರಾಟಕ್ಕೆ ಮುಂದಾಗಿದೆ.
ಇದನ್ನೂ ಓದಿ:ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೂರು ದಾಖಲು
ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಎನ್.ಸಿ.ಆರ್ ದಾಖಲಿಸಿದ್ದಾರೆ. ಬೆಂಗಳೂರು ನಗರದ ರೇಸ್ ಕೋರ್ಸ್ ಗೋಡೆಗೆ ಪೇ ಸಿಎಂ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ಪ್ರತಿಭಟಿಸಿದ್ದರು. ಈ ಹಿನ್ನೆಲೆ ಪೊಲೀಸರು ಎನ್.ಸಿ.ಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ನಿಂದ ಪೇಸಿಎಂ ಪೋಸ್ಟರ್ ಅಭಿಯಾನ: ಸಿಎಂ ನಿವಾಸಕ್ಕೆ ಹೆಚ್ಚಿದ ಪೊಲೀಸ್ ಭದ್ರತೆ