ಕರ್ನಾಟಕ

karnataka

ETV Bharat / state

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಗರ್ಭಪಾತ ಮಾಡಿಸಿದವನ ವಿರುದ್ಧ ದೂರು!

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮೋಸ ಮಾಡಿರುವ ಆರೋಪದ ಮೇರೆಗೆ ವ್ಯಕ್ತಿ ವಿರುದ್ಧ ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Complaint against the man who cheated to lady in Mysore
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ವ್ಯಕ್ತಿ ವಿರುದ್ಧ ದೂರು

By

Published : Jul 9, 2022, 3:58 PM IST

Updated : Jul 9, 2022, 10:52 PM IST

ಮೈಸೂರು: ಮದುವೆ ಆಗುತ್ತೇನೆ ಎಂದು ನಂಬಿಸಿ 5 ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿರುವ ವ್ಯಕ್ತಿ ಜೊತೆ ತನ್ನ ಮದುವೆ ಮಾಡಿಸುವಂತೆ ಮಹಿಳೆಯೋರ್ವರು ದೂರು ನೀಡಿರುವ ಘಟನೆ ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯನ್ನು(ದೂರು ಕೊಟ್ಟವರು) ಶಿವನಾಗು ಎಂಬುವ ವ್ಯಕ್ತಿ ಕಳೆದ 5 ವರ್ಷದಿಂದ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಮಹಿಳೆ ಗರ್ಭವತಿಯಾದಾಗ ಗರ್ಭಪಾತ ಮಾಡಿಸಿ ಈಗ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದಾನೆ. ಈ ಹಿನ್ನೆಲೆ ವ್ಯಕ್ತಿ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಹೆದ್ದಾರಿಗಳಲ್ಲಿರುವ ಮರಗಳ ಪುನಶ್ಚೇತನಕ್ಕೆ ವಿಶೇಷ ವ್ಯವಸ್ಥೆ: ಸಚಿವ ಸಿ.ಸಿ. ಪಾಟೀಲ್ ಹೇಳಿಕೆ

ಶಿವನಾಗು ಜೊತೆ ತನ್ನ ಮದುವೆ ಮಾಡಿಸಿ ಎಂದು ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೊತೆಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Last Updated : Jul 9, 2022, 10:52 PM IST

ABOUT THE AUTHOR

...view details