ಕರ್ನಾಟಕ

karnataka

ETV Bharat / state

ನಿಖಿಲ್​ ರಂಪಾಟ ಸುದ್ದಿ ಕಪೋಲಕಲ್ಪಿತ ಎಂದ್ರು ಸಿಎಂ ಹೆಚ್​ಡಿಕೆ

ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗದ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫಲಿತಾಂಶದ ದಿನ ಕಿರಿಕ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದ ಸುದ್ದಿಯನ್ನು ಸಿಎಂ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.

ನಿಖಿಲ್ ಕುಮಾರಸ್ವಾಮಿ

By

Published : May 25, 2019, 12:38 PM IST

Updated : May 25, 2019, 2:14 PM IST

ಮೈಸೂರು:ರಾಷ್ಟ್ರದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಅಖಾಡದಲ್ಲಿ ಸೋಲಿನ ಫಲಿತಾಂಶ ಪ್ರಕಟವಾದ ದಿನ ರಾತ್ರಿ ಇಲ್ಲಿನ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ನಿಖಿಲ್ ರಾದ್ಧಾಂತ ಮಾಡಿಕೊಂಡಿರುವುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.

ನಿಖಿಲ್​ ರಂಪಾಟ ಪ್ರಕರಣ ಕುರಿತು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ನಿಖಿಲ್​​ ದಾಂಧಲೆ ಪ್ರಕರಣ, ಅವಾಸ್ತವಿಕ ವರದಿ ಎಂದ್ರು ಸಿಎಂ

ಆದರೆ ಸುದ್ದಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವೀಟ್​ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಕನ್ನಡ ಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತವಾಗಿದೆ. ನಿಖಿಲ್​​ ಚಾರಿತ್ರ್ಯವಧೆ ಮಾಡುವ ದೃಷ್ಟಿಯಿಂದ ಈ ತರಹದ ಗಾಳಿ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಆ ಪತ್ರಿಕೆಯ ಸಂಪಾದಕರ ಗಮನಕ್ಕೆ ತಂದಿದ್ದೇನೆ. ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎಂದು ಮನವಿ ಮಾಡಿದ್ದಾರೆ.

Last Updated : May 25, 2019, 2:14 PM IST

ABOUT THE AUTHOR

...view details