ಮೈಸೂರು: ಗ್ರಾಹಕನಿಗೆ ಚಿನ್ನದ ಖಡ್ಗದಲ್ಲಿ ಕಬ್ಬಿಣ ಬೆರಸಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಚಿನ್ನದ ಅಂಗಡಿ ಮಾಲೀಕನ ವಿರುದ್ದ ದೂರು ದಾಖಲಾಗಿದೆ.
ಚಿನ್ನದಲ್ಲಿ ಕಬ್ಬಿಣ ಬೆರಸಿ ಗ್ರಾಹಕನಿಗೆ ಮೋಸ: ಮೈಸೂರಿನಲ್ಲಿ ಎಫ್ಐಆರ್
ಚಿನ್ನದಲ್ಲಿ ಕಬ್ಬಿಣ ಮಿಕ್ಸ್ ಮಾಡಿ ಗ್ರಾಹಕನಿಗೆ ವಂಚಿಸಿರುವ ಪ್ರಸಂಗ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಶಿವರಾಮ್ ಪೇಟೆಯ ಪ್ರಸಿದ್ದ ಪ್ರಕಾಶ್ ಆಭರಣದ ಅಂಗಡಿಯಲ್ಲಿ ಮಹೇಶ್ ಎಂಬುವರು 2019ರಲ್ಲಿ 47 ಗ್ರಾಂ ತೂಕದ ಚಿನ್ನದ ಖಡ್ಗ ಖರೀದಿ ಮಾಡಿದ್ದರು. ಆರ್ಥಿಕ ಸಮಸ್ಯೆಯಿಂದ ಚಿನ್ನದ ಖಡ್ಗವನ್ನು ಗಿರವಿ ಇಟ್ಟು ಹಣ ತೆಗೆದುಕೊಳ್ಳಲು ಖಾಸಗಿ ಗಿರವಿ ಕಂಪನಿಗೆ ತೆರಳಿದ್ದಾರೆ. ಈ ವೇಳೆ ಚಿನ್ನದ ಖಡ್ಗವನ್ನು ಪರೀಶಿಲಿಸಿದಾಗ 8 ಗ್ರಾಂ ಕಬ್ಬಿಣ ಮಿಶ್ರಣಮಾಡಿರುವುದು ಪತ್ತೆಯಾಗಿದೆ.
ಆಭರಣದ ಅಂಗಡಿಯಲ್ಲಿ ವಿಚಾರಿಸಿದಾಗ ಜ್ಯುವೇಲ್ಸ್ ಮಾಲೀಕರು ತಕ್ಷಣ ಆ ಕಬ್ಬಿಣ ಮಿಶ್ರಿತ ಖಡ್ಗವನ್ನು ತೆಗೆದುಕೊಂಡು ಚಿನ್ನದ ಬದಲಿಗೆ ಸರ ನೀಡಿ 5 ಸಾವಿರ ಹಣ ನೀಡಿ ಕಳುಹಿಸಿದ್ದಾರೆ. ಈ ಬಗ್ಗೆ ಮಹೇಶ್ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರನ್ನು ಕರೆದುಕೊಂಡು ಬಂದಾಗ ಚಿನ್ನದ ಅಂಗಡಿ ಮಾಲೀಕ ಪರಾರಿಯಾಗಿದ್ದಾನೆ.