ಮೈಸೂರು :ಪಂಚ ರಥೋತ್ಸವದ ವೇಳೆ ಪಾರ್ವತಿ ಅಮ್ಮನವರ ರಥದ ಚಕ್ರ ಪುಡಿ ಪುಡಿಯಾದ ಹಿನ್ನೆಲೆ ಘಟನೆಗೆ ಸಂಬಂಧಿಸಿದ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡುತ್ತೇನೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಪಂಚ ರಥೋತ್ಸವದ ವೇಳೆ ಚಕ್ರ ಪುಡಿ ಪುಡಿ ದೇವಸ್ಥಾನದ ದಾಸೋಹ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಥದ ನಿರ್ವಹಣೆಯ ಜವಬ್ದಾರಿ ದೇವಾಲಯದ ಎಂಜಿನಿಯರ್ ರವಿಕುಮಾರ್ ಹಾಗೂ ಕಾಮಾಟಿ ಮಹೇಶ್ ಅವರದಾಗಿತ್ತು. ಪಂಚ ರಥೋತ್ಸವಕ್ಕೆ ಸಾಕಷ್ಟು ಸಮಯವಕಾಶವಿದ್ದರೂ, ರಥಗಳನ್ನು ಸರಿಯಾಗಿ ದುರಸ್ಥಿ ಮಾಡಿಲ್ಲ. ಆದ್ದರಿಂದ ರಥದ ಚಕ್ರ ತುಂಡಾಗಿದೆ ಎಂದರು.
ಓದಿ:ಮೈಮುಲ್ ಅಧ್ಯಕ್ಷ ಅವಿರೋಧ ಆಯ್ಕೆ.. ಹೆಚ್ಡಿಕೆಗೆ ಮತ್ತೆ ಟಾಂಗ್ ಕೊಟ್ಟ ಜಿ ಟಿ ದೇವೇಗೌಡ..
ಚಿಕ್ಕ ರಥ ಮುರಿದು ಬೀಳಲು ಅಧಿಕಾರಿಗಳೇ ಹೊಣೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಸ್ವಲ್ಪ ಹೆಚ್ಚುಕಮ್ಮಿಯಾಗಿದ್ರೆ ಯಾರು ಹೊಣೆ?ಏನಾದ್ರೂ ತೊಂದರೆ ಇದ್ದಿದ್ರೆ, ಮೊದಲೇ ರೆಡಿ ಮಾಡ್ಕೊಳ್ಳಬೇಕಿತ್ತು.
ಇದು ಎಂಜಿನಿಯರ್ಗಳ ಕರ್ತವ್ಯಲೋಪ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳನ್ನು ಅಮಾನತುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದೇನೆ ಎಂದರು.