ಕರ್ನಾಟಕ

karnataka

ETV Bharat / state

ದಿನದ ಮಟ್ಟಿಗೆ ಅರಣ್ಯಾಧಿಕಾರಿಯಾಗಿ ಕ್ಯಾನ್ಸರ್‌ಪೀಡಿತ ಬಾಲಕಿಯ ಕನಸು ನನಸು!

'ನಮ್ಮ ಹಳ್ಳಿಯ ಸಮೀಪ ಕುರುಚಲು ಅರಣ್ಯವಿದೆ. ನನಗೆ ಬಾಲ್ಯದಿಂದಲೂ ಅರಣ್ಯ ಸಂರಕ್ಷಣೆ ಕುರಿತು ಆಸಕ್ತಿ ಇತ್ತು. ಮೈಸೂರಿನ ಅರಣ್ಯ ಭವನದಲ್ಲಿ ಡಿ ದರ್ಜೆ ನೌಕರರಾಗಿದ್ದ ನನ್ನ ಅಜ್ಜಿ ಹೇಳುತ್ತಿದ್ದ ಪ್ರಾಣಿಗಳ ಕತೆಗಳು ನನ್ನ ಮೇಲೆ ಪರಿಣಾಮ ಬೀರಿದವು. ಹೀಗಾಗಿ ಅರಣ್ಯಾಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ'- ಕ್ಯಾನ್ಸರ್‌ ಪೀಡಿತ ಬಾಲಕಿ ಐಶ್ವರ್ಯ

ಮೂಳೆ ಕ್ಯಾನ್ಸರ್​​ಗೆ ತುತ್ತಾಗಿರುವ ಬಾಲಕಿ ಐಶ್ವರ್ಯ
ಮೂಳೆ ಕ್ಯಾನ್ಸರ್​​ಗೆ ತುತ್ತಾಗಿರುವ ಬಾಲಕಿ ಐಶ್ವರ್ಯ

By

Published : Apr 29, 2022, 3:04 PM IST

ಮೈಸೂರು: ಮೂಳೆ ಕ್ಯಾನ್ಸರ್​​ ಖಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯದ ಬೆವಕಲ್ ಗ್ರಾಮದ 14 ವರ್ಷದ ಬಾಲಕಿ ಐಶ್ವರ್ಯ ತಾನು ಆಸೆಪಟ್ಟಂತೆಯೇ ನಾಗರಹೊಳೆ ಅಭಯಾರಣ್ಯ ವಲಯದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಒಂದು ದಿನದ ಮಟ್ಟಿಗೆ ಕಾರ್ಯನಿರ್ವಹಿಸಿದರು. ಈ ಮುಖೇನ ತನ್ನ ಮನದ ಬಯಕೆಯನ್ನು ಪೂರ್ಣಗೊಳಿಸಿದರು.

ಈ ಸಂಬಂಧ ಬೆಂಗಳೂರಿನ ಮೇಕ್ ವಿಶ್ ಸಂಸ್ಥೆ ನಾಲ್ಕು ತಿಂಗಳ ಹಿಂದೆ ಅರಣ್ಯ ಇಲಾಖೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 5 ರಿಂದ 16 ವರ್ಷದ ಮಕ್ಕಳ ಆಸೆ ಈಡೇರಿಸುವ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ. ಇದೀಗ ಐಶ್ವರ್ಯಾಳ ಮನದಿಂಗಿತವನ್ನೂ ಕೂಡಾ ಈ ಸಂಸ್ಥೆ ಈಡೇರಿಸಿತು.


ಇದನ್ನೂ ಓದಿ: ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದ ಸಿದ್ದರಾಮಯ್ಯ!

ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎಸಿಎಫ್ ಅವರಿಂದ ಗೌರವ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಐಶ್ವರ್ಯ, 'ನಮ್ಮ ಹಳ್ಳಿಯ ಸಮೀಪ ಕುರುಚಲು ಅರಣ್ಯವಿದೆ. ನನಗೆ ಬಾಲ್ಯದಿಂದಲೂ ಅರಣ್ಯ ಸಂರಕ್ಷಣೆ ಕುರಿತು ಆಸಕ್ತಿ ಇತ್ತು. ಮೈಸೂರಿನ ಅರಣ್ಯ ಭವನದಲ್ಲಿ ಡಿ ದರ್ಜೆ ನೌಕರರಾಗಿದ್ದ ನನ್ನ ಅಜ್ಜಿ ಹೇಳುತ್ತಿದ್ದ ಪ್ರಾಣಿಗಳ ಕತೆಗಳು ನನ್ನ ಮೇಲೆ ಪರಿಣಾಮ ಬೀರಿದವು. ಹೀಗಾಗಿ ಅರಣ್ಯಾಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ' ಎಂದರು.

ಎಸಿಎಫ್ ಸತೀಶ್ ಪ್ರತಿಕ್ರಿಯಿಸಿ, 'ಐಶ್ವರ್ಯ ಹಾಗೂ ಮೇಕ್ ವಿಶ್ ಸಂಸ್ಥೆಯ ಮನವಿಗೆ ಸ್ಪಂದಿಸಿ ಆಕೆಗೆ ದಿನದ ಮಟ್ಟಿಗೆ ವಲಯ ಅರಣ್ಯಾಧಿಕಾರಿ ಹುದ್ದೆ ಕೊಟ್ಟಿದ್ದೇವೆ' ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details