ಮೈಸೂರು: ನಕಲಿ ಬಿಲ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಜಿಎಸ್ಟಿ ಕಟ್ಟದೇ ಮೋಸ ಮಾಡಿದ ಉದ್ಯಮಿಯನ್ನು ಜಿ.ಎಸ್.ಟಿ ಅಪರಾಧಿ ದಳ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಜಿಎಸ್ ಟಿ ಪಾವತಿಸದೇ ಮೋಸ ಮಾಡಿದ್ದ ಉದ್ಯಮಿ ಬಂಧನ - kannadanews
ನಕಲಿ ಬಿಲ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಜಿಎಸ್ ಟಿ ಕಟ್ಟದೆ ಮೋಸ ಮಾಡಿದ ಉದ್ಯಮಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.
ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಂಜಾಬ್ ಮೂಲದ ಸ್ಪೆಕ್ಟರ್ ಪೈಪ್ ಪ್ರೈವೇಟ್ ಲಿಮಿಟೆಡ್ ಅಂದರೆ ನೀರಾವರಿ ಪ್ರದೇಶಗಳಿಗೆ ಬಳಸುವ ಪೈಪ್ ತಯಾರಿಕ ಘಟಕದ ಮಾಲೀಕರಾದ ಪಂಜಾಬ್ ಮೂಲದ ಅನಿಲ್ ಮೆಹ್ರಾ ಎಂಬ ವ್ಯಕ್ತಿ ಕಳೆದ ಒಂದೂವರೆ ವರ್ಷದಿಂದ ತಮ್ಮ ಕಾರ್ಖಾನೆಗೆ ಯಾವುದೇ ಕಚ್ಚಾವಸ್ತುಗಳನ್ನು ತೆಗೆದುಕೊಳ್ಳದೇ 7.5 ಕೋಟಿ ರೂಪಾಯಿಗಳ ನಕಲಿ ಬಿಲ್ಗಳನ್ನು ಸೃಷ್ಟಿಸಿ ಜಿಎಸ್ ಟಿ ಕಟ್ಟದೇ ವಂಚಿಸುತ್ತಿದ್ದನು. ಈ ವ್ಯಕ್ತಿಯನ್ನು ಜಿ ಎಸ್ ಟಿ ತನಿಖಾ ದಳ ನಿನ್ನೆ ವಿಚಾರಣೆಗೆ ಕರೆಸಿಕೊಂಡು ಕಚೇರಿಯಲ್ಲೇ ಬಂಧಿಸಿದೆ.
ಈ ವ್ಯಕ್ತಿ ದೇಶದ ಹಲವು ಕಡೆ ಇದೇ ರೀತಿ ವಂಚನೆ ಮಾಡಿದ್ದ ಎಂದು ತಿಳಿದು ಬಂದಿದೆ. ಆದ್ದರಿಂದ ಈ ವ್ಯಕ್ತಿಯನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೇವೆ. ಜೊತೆಗೆ ಈತನಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶ ಮಾಡಬಹುದು ಎಂಬ ಕಾರಣಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಗತ್ಯವಿದ್ದರೆ ನ್ಯಾಯಾಲಯದ ಅನುಮತಿ ಪಡೆದು ನಮ್ಮ ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತೇವೆ ಎಂದು ಜಿಎಸ್ ಟಿ ವಿಚಕ್ಷಣ ದಳದ ಹೆಚ್ಚುವರಿ ಜಿಲ್ಲಾಧಿಕಾರಿ ಸ್ವಾಮಿ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.