ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿಗೆ ಕೋರ್ಟ್ ಆದೇಶ ಗೊತ್ತಿರಬೇಕು: ಸಿಎಂ ಬಿಎಸ್​ವೈ ಹೀಗಂದಿದ್ದು ಏಕೆ?

ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಭೇಕು ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್​ಗೆ ಬಿಎಸ್​ವೈ ತಿರುಗೇಟು ನೀಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Oct 2, 2019, 10:52 AM IST

ಮೈಸೂರು: ಬಂಡೀಪುರ ರಾತ್ರಿ ಸಂಚಾರದ ವಿಚಾರದಲ್ಲಿ ಈಗಾಗಲೇ ಕೋರ್ಟ್ ಆದೇಶ ನೀಡಿದ್ದು, ನಾನು ಅದನ್ನು ಮೀರುವುದಿಲ್ಲ. ರಾಹುಲ್‌ ಗಾಂಧಿಗೆ ಈ ವಿಚಾರ ಗೊತ್ತಿರಬೇಕು ಅಂದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಇನ್ನೂ ಸುತ್ತೂರು ಶ್ರೀಗಳ ಫೋನ್ ಕದ್ದಾಲಿಕೆ ಆಗಿರುವುದು ನನಗೆ ಗೊತ್ತಿಲ್ಲ, ಯಾರ ಯಾರ ಟೆಲಿಫೋನ್ ಕದ್ದಾಲಿಕೆ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಈ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಇದೇ ವೇಳೆ ನೆರೆ ಹಾವಳಿ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಪಕ್ಷವಾಗಲಿ ಗೊಂದಲ ಉಂಟು ಮಾಡುವುದು ಬೇಡ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸದಲ್ಲಿದ್ದರು ಈಗ ಬಂದಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಪರಿಹಾರ ಸಿಗುತ್ತದೆ. ‌ಈ ನಡುವೆ ಗೊಂದಲ ಹೇಳಿಕೆ ನೀಡುವುದು ಬೇಡ ಎಂದಿದ್ದಾರೆ. ಒತ್ತಡ, ಸರ್ವ ಪಕ್ಷಗಳ ನಿಯೋಗದ ಅಗತ್ಯವಿಲ್ಲ. ಪ್ರಧಾನಿ ಮೋದಿಗೆ ಎಲ್ಲವೂ ಗೊತ್ತಿದೆ, ‌ಈಗಾಗಲೇ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರಿಗೆ ಎಲ್ಲಾ ವಿಚಾರ ತಿಳಿಸಿದ್ದು ತಕ್ಷಣ ಹಣ ಬಿಡುಗಡೆ ಮಾಡಲಿದ್ದಾರೆ ಎಂದಿದ್ದಾರೆ.

ABOUT THE AUTHOR

...view details