ಕರ್ನಾಟಕ

karnataka

ETV Bharat / state

ನಂಜನಗೂಡು: ಶಾಸಕರಿಗೆ ಸಮಸ್ಯೆ ಹೇಳಲು ಬಂದ ಮುಂಖಡನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ, ಕಾಲ್ಕಿತ್ತ ಎಂಎಲ್​ಎ - ಮೈಸೂರಲ್ಲಿ ಶಾಸಕ ಹರ್ಷವರ್ಧನ ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ

ಶಾಸಕ ಹರ್ಷವರ್ಧನ ಅವರಿಗೆ ಸಮಸ್ಯೆ ಹೇಳಲು ಬಂದ ವ್ಯಕ್ತಿಗೆ ಶಾಸಕರ ಬೆಂಬಲಿಗರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಶಾಸಕರಿಗೆ ಸಮಸ್ಯೆ ಹೇಳಲು ಬಂದ ಮುಂಖಡನ ಮೇಲೆ ಹಿಗ್ಗಾ ಮುಗ್ಗ ಹಲ್ಲೆ, ಕಾಲ್ಕಿತ್ತ ಎಂಎಲ್​ಎ
ಶಾಸಕರಿಗೆ ಸಮಸ್ಯೆ ಹೇಳಲು ಬಂದ ಮುಂಖಡನ ಮೇಲೆ ಹಿಗ್ಗಾ ಮುಗ್ಗ ಹಲ್ಲೆ, ಕಾಲ್ಕಿತ್ತ ಎಂಎಲ್​ಎ

By

Published : Dec 30, 2021, 4:39 PM IST

Updated : Dec 30, 2021, 4:46 PM IST

ಮೈಸೂರು: ಶಾಸಕರಿಗೆ ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ಎಳೆದುಕೊಂಡು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಇಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ನಂಜನಗೂಡು ಪಟ್ಟಣದ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಮಸ್ಯೆಗಳನ್ನು ಕೇಳಲು ಆಮಿಸಿದಾಗ, ಅಲ್ಲಿಗೆ ಆಗಮಿಸಿದ ಸ್ಥಳೀಯ ಮುಖಂಡ ಪುಟ್ಟಸ್ವಾಮಿ ಎಂಬುವವರು ಶಾಸಕರಿಗೆ ಅಲ್ಲಿನ‌ ಸಮಸ್ಯೆ ತಿಳಿಸಲು ಮುಂದಾಗಿದ್ದಾರೆ. ಇದನ್ನು ನೋಡಿದ ನಗರಸಭಾ ಸದಸ್ಯ ಕಪಿಲೇಶ್ ಹಾಗೂ ಆತನ ಬೆಂಬಗರು ಪುಟ್ಟಸ್ವಾಮಿ ಹಿಡಿದು ಎಳೆದಾಡಿ, ಕಾಲೇಜಿನ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ.

ಶಾಸಕರಿಗೆ ಸಮಸ್ಯೆ ಹೇಳಲು ಬಂದ ಮುಂಖಡನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ

ಇದನ್ನೂ ಓದಿ: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ

ಘಟನೆ ನಡೆಯುತ್ತಿದ್ದಂತೆ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದ್ದರಿಂದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಹಲ್ಲೆಗೊಳಗಾದ ಪುಟ್ಟಸ್ವಾಮಿ ಸಹ ಕಾರನ್ನೇರಿ ಹೊರಟುಹೋಗಿದ್ದು. ಅ ಹಲ್ಲೆಗೆ ಯಾಕಾಗಿ ಆಯಿತು ಎಂಬ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಹಲ್ಲೆ ಮಾಡಿದ ಕಪಿಲೇಶ್ ನಂಜನಗೂಡಿನ ಬಿಜೆಪಿಯ ನಗರಸಭಾ ಸದಸ್ಯನಾಗಿದ್ದಾನೆ.

Last Updated : Dec 30, 2021, 4:46 PM IST

For All Latest Updates

TAGGED:

ABOUT THE AUTHOR

...view details