ಕರ್ನಾಟಕ

karnataka

ETV Bharat / state

370ನೇ ವಿಧಿ ರದ್ದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣ: ಯದುವೀರ್​​

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ಯದುವೀರ್ ಉದ್ಘಾಟಿಸಿದರು.

370ನೇ ವಿಧಿ ರದ್ದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣ:ಯದುವೀರ್

By

Published : Aug 6, 2019, 2:18 PM IST

ಮೈಸೂರು: ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮ ಭಾರತದ ಪಾಲಿಗೆ ಒಂದು ಐತಿಹಾಸಿಕ ಕ್ಷಣ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಹೇಳಿಕೆ ನೀಡಿದ್ದಾರೆ.

370ನೇ ವಿಧಿ ರದ್ದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣ: ಯದುವೀರ್

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್, 370ನೇ ವಿಧಿಯನ್ನು ರದ್ದುಗೊಳಿಸಿರುವುದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣ. ನಾವೆಲ್ಲರೂ ಇದಕ್ಕೆ ಒಪ್ಪಿಗೆ ಕೊಡಬೇಕಾಗಿದೆ. ಈ ನಿರ್ಧಾರಕ್ಕೆ ನಮ್ಮೆಲ್ಲರ ಬೆಂಬಲಿವಿದೆ ಎಂದರು. ಈ ತೀರ್ಮಾನದಿಂದ ಕಾಶ್ಮೀರ ಮತ್ತು ಭಾರತದಲ್ಲಿ ಶಾಂತಿ ನೆಲಸಲಿದೆ. ಆ ಸ್ಥಳ ಅಭಿವೃದ್ಧಿಗೊಳ್ಳಲಿದೆ ಎಂದರು.

ಈ ವರ್ಷ ದಸರಾ ಸಿದ್ಧತೆಗೆ ವಿಳಂಬವಾಗಿದೆಯಾ ಎಂಬ ಪ್ರಶ್ನೆಗೆ, ಅದನ್ನು ಸರ್ಕಾರಕ್ಕೆ ಕೇಳಬೇಕು. ಅರಮನೆ ಕಡೆಯಿಂದ ಏನು ಆಗಬೇಕು ಅದು ಆಗುತ್ತದೆ. ಸರ್ಕಾರದಿಂದ ನಡೆಯಬೇಕಾದದನ್ನು ನೀವು ಅವರ ಬಳಿ ಪ್ರಶ್ನೆ ಮಾಡಬೇಕೆಮದರು.

ನಿಮಗಿರುವ ಸಾಮಾಜಿಕ ಕಳಕಳಿಯನ್ನು ನೋಡಿದರೆ ನೀವು ರಾಜಕಾರಣಕ್ಕೆ ಏಕೆ ಬರಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಯದುವೀರ್, ಬರಬೇಕು ಅಥವಾ ಬರಬಾರದು ಎನ್ನುವುದು ನನ್ನ ತೀರ್ಮಾನವಲ್ಲ. ನನಗೆ ಇನ್ನೂ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಅರಮನೆ ಕಡೆಯಿಂದ ವಿದ್ಯಾರ್ಥಿಗಳಿಗೆ ಸಹಾಯ ಏನಾದರು ಇದ್ದರೆ ಏನು ಮಾಡಬೇಕು ಎಂಬುದನ್ನ ನಾವು ನೋಡುತ್ತೇವೆ. ಅರಮನೆ ಕಡೆಯಿಂದ ಎಲ್ಲಾ ಕೆಲಸ ಕಾರ್ಯಗಳಿಗೆ ನಮ್ಮ ಬೆಂಬಲವಿರುತ್ತದೆ. ಸದ್ಯಕ್ಕೆ ರಾಜಕೀಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದರು.

ABOUT THE AUTHOR

...view details