ಕರ್ನಾಟಕ

karnataka

ETV Bharat / state

ನಂಜನಗೂಡಿನಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಪಾಸಿಟಿವ್ - ಒಟ್ಟು ೧೬ ಜನ ಕೊರೋನಾ ಪಾಸಿಟಿವ್

ಮೈಸೂರು ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲಿಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್​ ಪೀಡಿತರ ಸಂಖ್ಯೆ 16ಕ್ಕೇರಿದಂತಾಗಿದೆ.

ನಂಜನಗೂಡಿನಲ್ಲಿ ಮತ್ತೆ ಇಬ್ಬರು ಕೊರೊನಾ ಪಾಸಿಟಿವ್, 2 more persons found kovid-19 positive
ಜಿಲ್ಲಾಧಿಕಾರಿ ಅಭಿರಾಮ್​ ಜಿ. ಶಂಕರ್

By

Published : Apr 1, 2020, 3:44 PM IST

ಮೈಸೂರು: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಎರಡು ಪ್ರಕರಣ ಸೇರಿಸಿದರೆ ಮೈಸೂರು ಜಿಲ್ಲೆಯಲ್ಲಿ ಈವರೆಗೆ 16 ಜನರಿಗೆ ಕೋವಿಡ್​-19 ಸೋಂಕು ತಗುಲಿದಂತಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್ ಕಾರ್ಖಾನೆಯ ಇಬ್ಬರು ನೌಕರರಿಗೆ ಕೋವಿಡ್​-19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ 16 ಪಾಸಿಟಿವ್​ ಪ್ರಕರಣಗಳ ಪೈಕಿ 14 ಜನ ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುವವರೇ ಆಗಿದ್ದು ಅಚ್ಚರಿ ಮೂಡಿಸಿದೆ.

ಕೊರೊನಾ ಸೋಂಕಿತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್​ ಜಿ. ಶಂಕರ್, ಇಂದು ಕೋವಿಡ್​-19 ಪತ್ತೆಯಾದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details