ಮೈಸೂರು: ವಿಜಯದಶಮಿಯಂದು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ 36,420 ಪ್ರವಾಸಿಗರು ಭೇಟಿ ಕೊಟ್ಟಿದ್ದು, ಅಂದು 35,92,160 ರೂ.ಆದಾಯ ಸಂಗ್ರಹವಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಆಯುಧ ಪೂಜೆ ಹಾಗೂ ದಸರಾ ಹಬ್ಬದ 10 ದಿನಗಳ ಅವಧಿಯಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ವಿವರ ಹೀಗಿದೆ. 2018ರಲ್ಲಿ 10 ದಿನಗಳ ಅವಧಿಯಲ್ಲಿ 1.53 ಲಕ್ಷ ಮಂದಿ ವೀಕ್ಷಣೆ, 10 ದಿನಗಳಲ್ಲಿ 105.64 ಲಕ್ಷ ರೂ.ಸಂಗ್ರಹವಾಗಿದೆ. ಆಯುಧಪೂಜೆ ದಿನ ವೀಕ್ಷಕರ ಸಂಖ್ಯೆ 22,398, ಸಂಗ್ರಹವಾದ ಹಣ 17.74 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 32,301, ಸಂಗ್ರಹವಾದ ಹಣ 25.40 ಲಕ್ಷ ರೂ.
2019ರಲ್ಲಿ 10 ದಿನಗಳಲ್ಲಿ ವೀಕ್ಷಕರ ಸಂಖ್ಯೆ 1.65 ಲಕ್ಷ , 10 ದಿನಗಳಲ್ಲಿ ಸಂಗ್ರಹವಾದ ಹಣ 159.76 ಲಕ್ಷ ರೂ. ಆಯುಧ ಪೂಜೆ ವೀಕ್ಷಕರ ಸಂಖ್ಯೆ 30,273, ಸಂಗ್ರಹವಾದ ಹಣ 29.77 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 28,386, ಸಂಗ್ರಹವಾದ ಹಣ 28.28 ಲಕ್ಷ ರೂ. 2020ರಲ್ಲಿ 10 ದಿನಗಳಲ್ಲಿ ವೀಕ್ಷಕರ ಸಂಖ್ಯೆ 20ಸಾವಿರ, 10 ದಿನಗಳಲ್ಲಿ ಸಂಗ್ರಹವಾದ ಹಣ 19.56 ಲಕ್ಷ ರೂ. ಆಯುಧ ಪೂಜೆ ಭೇಟಿ ನೀಡಿದ ಪ್ರವಾಸಿಗರು 3,534, ಸಂಗ್ರಹವಾದ ಹಣ 3.54 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 7,264, ಸಂಗ್ರಹವಾದ ಹಣ 7.33 ಲಕ್ಷ ರೂ.