ಮಂಡ್ಯ: ಜಿಲ್ಲೆಯ ಕೊರೊನಾ ವಾರಿಯರ್ಗೂ ಮಹಾಮಾರಿ ಅಂಟಿಕೊಂಡಿದೆ. ಕರ್ತವ್ಯ ನಿರತ ಮುಖ್ಯ ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆ ಕೆ.ಆರ್.ಪೇಟೆಯ ಎರಡು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಕೆ.ಆರ್.ಪೇಟೆಯಲ್ಲಿ ಪೇದೆಗೆ ಕೊರೊನಾ: ಎರಡು ಪೊಲೀಸ್ ಠಾಣೆಗಳು ಸೀಲ್ ಡೌನ್! - ಮಂಡ್ಯದ ಎರಡು ಪೊಲೀಸ್ ಠಾಣೆಗಳು ಸೀಲ್ ಡೌನ್
ಮಂಡ್ಯದ ಕೆ.ಆರ್.ಪೇಟೆ ಠಾಣೆಯ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಎರಡು ಪೊಲೀಸ್ ಠಾಣೆಗಳನ್ನು ರಾತ್ರೋರಾತ್ರಿ ಸೀಲ್ ಡೌನ್ ಮಾಡಲಾಗಿದ್ದು, ಪೇದೆಯೊಂದಿಗೆ ಸಂಪರ್ಕ ಹೊಂದಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಕೆ.ಆರ್.ಪೇಟೆ ಪಟ್ಟಣ ಠಾಣೆಯ ಮುಖ್ಯ ಪೇದೆಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಎಸ್ಪಿ ಪರಶುರಾಮ್ ಭೇಟಿ ನೀಡಿ ಎರಡು ಠಾಣೆಗಳನ್ನು ಸೀಲ್ ಡೌನ್ ಮಾಡಿಸಿದ್ದಾರೆ. ಜೊತೆಗೆ ಸೋಂಕಿತ ಪೇದೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗ್ರಾಮಾಂತರ ಹಾಗೂ ಪಟ್ಟಣ ಠಾಣೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ರಾತ್ರಿ ಠಾಣೆಗೆ ಭೇಟಿ ನೀಡಿದ ಎಸ್ಪಿ, ಸೀಲ್ ಡೌನ್ ಮಾಡಿಸಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಜೊತೆಗೆ ತುರ್ತು ದೂರುಗಳನ್ನು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಸ್ವೀಕಾರ ಮಾಡಲಾಗುವುದು. ಬೇರೆ ಕಡೆಯಿಂದ ನಿಯೋಜನೆಗೊಂಡ ಸಿಬ್ಬಂದಿ ಪ್ರವಾಸಿ ಮಂದಿರದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.