ಕರ್ನಾಟಕ

karnataka

ETV Bharat / state

ಕೊರೊನಾ ಹಾಟ್​ಸ್ಪಾಟ್​ ಮಂಡ್ಯದಲ್ಲಿ ಕರ್ಫ್ಯೂಗೆ ಬೆಂಬಲ

ರಾಜ್ಯಾದ್ಯಂತ ಕರ್ಫ್ಯೂ ಜಾರಿ ಹಿನ್ನೆಲೆ, ಮಂಡ್ಯ ಸ್ತಬ್ಧವಾಗಿದೆ. ಜಿಲ್ಲೆಯ ವರ್ತಕರು, ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

The curfew got the support of Mandya people
ಕರ್ಫ್ಯೂಗೆ ಸಿಕ್ಕಿತು ಮಂಡ್ಯ ಜನತೆಯ ಬೆಂಬಲ

By

Published : May 24, 2020, 11:13 AM IST

ಮಂಡ್ಯ:ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕರ್ಫ್ಯೂಗೆ ಜಿಲ್ಲೆಯ ವರ್ತಕರು, ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

ಕರ್ಫ್ಯೂಗೆ ಬೆಂಬಲ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವಶ್ಯಕ ವಸ್ತು ಸಾಗಾಣಿಕೆ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಬಂದ್ ಆಗಿದೆ.

ಎಲ್ಲಾ ಅಂಗಡಿಗಳ ಮಾಲೀಕರು ಸರ್ಕಾರದ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದು, ನಗರದ ವಿವಿ ರಸ್ತೆ, ಪೇಟೆ ಬೀದಿ, ಅಂಬೇಡ್ಕರ್ ರಸ್ತೆ, ವಿನೋಬಾ ರಸ್ತೆ, ಕೆ.ಆರ್‌ ರಸ್ತೆಯಲ್ಲಿರುವ ಅಂಗಡಿಗಳು ಬಂದ್ ಆಗಿವೆ. ಔಷಧ ಅಂಗಡಿಗಳು ಮಾತ್ರ ತೆರೆದಿವೆ. ಇನ್ನೂ ಅವಶ್ಯಕ ವಸ್ತುಗಳ ಖರೀದಿಗೆಂದು ಕೆಲವರು ದ್ವಿಚಕ್ರ ವಾಹನ ಸವಾರರು ಅನವಶ್ಯಕವಾಗಿ ಸಂಚಾರ ಮಾಡುತ್ತಿದ್ದದ್ದು ಕಂಡು ಬಂದಿತು.

ABOUT THE AUTHOR

...view details