ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಗವಿಮಠ ಮತ್ತು ಸಿಂಧಘಟ್ಟದ ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ತಪಾಸಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಕ್ವಾರಂಟೈನ್ ಆಗಿದ್ದ ಮುಂಬೈ ಕನ್ನಡಿಗರು ಪ್ರತಿಭಟನೆ ನಡೆಸಿದರು.
ಪರೀಕ್ಷೆ ಮಾಡಿ ನಮ್ಮನ್ನು ಹೊರಗೆ ಬಿಡಿ: ಕ್ವಾರಂಟೈನ್ ಆದವರಿಂದ ಪ್ರತಿಭಟನೆ - ಪರೀಕ್ಷೆ ಮಾಡಿ
14 ದಿನ ಹಾಸ್ಟೆಲ್ ಕ್ವಾರಂಟೈನ್ ಎಂದು ಹೇಳಿ 25 ದಿನಗಳಾದರೂ ಮನೆಗೆ ಕಳುಹಿಸಿಲ್ಲ. ಫಲಿತಾಂಶ ಏನು ಎಂದು ಹೇಳದೇ ಸುಮ್ಮನೆ ಕ್ವಾರಂಟೈನ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ
ವೈದ್ಯರು ಬಂದು ತಪಾಸಣೆ ಮಾಡುತ್ತಿಲ್ಲ. 14 ದಿನ ಹಾಸ್ಟೆಲ್ ಕ್ವಾರಂಟೈನ್ ಎಂದು ಹೇಳಿ 25 ದಿನಗಳಾದರೂ ಮನೆಗೆ ಕಳುಹಿಸಿಲ್ಲ. ಇನ್ನೂ ಫಲಿತಾಂಶ ಏನು ಎಂದು ಹೇಳದೆ ಸುಮ್ಮನೆ ಕ್ವಾರಂಟೈನ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಹೆಚ್ಚಿನ ಜನರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಮಕ್ಕಳು, ಬಾಣಂತಿಯರ ಸಮಸ್ಯೆ ಕೇಳುತ್ತಿಲ್ಲ ಎಂದು ಪ್ರತಿಭಟನೆ ಮಾಡಿದರು.