ಮಂಡ್ಯ:ಲಂಚಕ್ಕಾಗಿ ಗ್ರಾಮ ಪಂಚಾಯತ ಪಿಡಿಒಗಳಿಗೆ ಕಿರುಕುಳ ನೀಡಿ, ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚ ಕೊಡದಿದ್ದಲ್ಲಿ ಇಲ್ಲಸಲ್ಲದ ಕ್ಯಾತೆ ತೆಗೆದು ಮೇಲಾಧಿಕಾರಿಗೆ ದೂರು ಕೊಡುವುದಾಗಿ ಬೆದರಿಸುತ್ತಿದ್ದ ಆರೋಪದ ಆಧಾರ ಮೇಲೆ ಶ್ರೀರಂಗಪಟ್ಟಣದ ತಾಲೂಕು ಪಂಚಾಯತ್ ಇಒ ಬೈರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಶ್ರೀರಂಗಪಟ್ಟಣ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯ ಹಣದ ದಾಹಕ್ಕೆ ಬೇಸತ್ತ ಚಾನಲ್ ತಾಲೂಕು ವ್ಯಾಪ್ತಿಯ ಪಿಡಿಒಗಳು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದರು.
ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಶೇ. 4ರಿಂದ ಶೇ.20 ಪರ್ಸಂಟೇಜ್ ಹಣಕ್ಕಾಗಿ ಇಒ ಪೀಡಿಸುತ್ತಿದ್ದರಂತೆ. ಪರ್ಸೆಂಟೇಜ್ ನೀಡಲಿಲ್ಲ ಅಂದ್ರೆ ಬಿಲ್ ಮಂಜೂರು ಮಾಡಲಿಲ್ಲವಂತೆ. ಇ-ಸ್ವತ್ತು ಮಾಡಿಸುವವರಿಂದಲೂ ಹಣ ಪಡೆದು ತನಗೂ ಕೊಡಿ ಎಂದು ಪಿಡಿಒಗಳಿಗೆ ಇಒ ತಾಕೀತು ಮಾಡಿದ್ದರಂತೆ. ಇಒ ಬೈರಪ್ಪರ ಕಿರುಕುಳಕ್ಕೆ ಬೇಸತ್ತ ಪಿಡಿಒಗಳು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಕೊಟ್ಟಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬೈರಪ್ಪ ಪರ್ಸಂಟೇಜ್ ಕೇಳುತ್ತಿರುವ ಆಡಿಯೋ -ವಿಡಿಯೋ ವೈರಲ್ ಆಗಿದೆ.