ಕರ್ನಾಟಕ

karnataka

ETV Bharat / state

ನಾಳೆ ಮಂಡ್ಯಕ್ಕೆ ಸುಮಲತಾ ಅಂಬರೀಶ್ ಭೇಟಿ : ಕಲ್ಲು ಗಣಿಗಾರಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ - ಸುಮಲತಾ ಅಂಬರೀಶ್

ಮೊದಲು ತಿಂಗಳಿಗೊಮ್ಮೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದ ಸಂಸದೆ, ಇದೀಗ ವಾರದಲ್ಲಿ ಎರಡು ಬಾರಿ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ..

Sumalatha Ambarish
ನಾಳೆ ಮಂಡ್ಯಕ್ಕೆ ಸುಮಲತಾ ಅಂಬರೀಶ್ ಭೇಟಿ

By

Published : Jul 12, 2021, 1:39 PM IST

ಮಂಡ್ಯ :ಸ್ವಾಭಿಮಾನಿ ಸಂಸದೆ ಎಂದು ಪ್ರಖ್ಯಾತಿ ಪಡೆದಿರುವ ಸುಮಲತಾ ಅಂಬರೀಶ್​ ಅವರು ನಾಳೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ನಾಳೆ ಮಂಡ್ಯಕ್ಕೆ ಸುಮಲತಾ ಅಂಬರೀಶ್ ಭೇಟಿ

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಹಿರಿಯ ಭೂ ವಿಜ್ಞಾನಿ, ಉಪ ವಿಭಾಗಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲೆಯ ಕಲ್ಲು ಗಣಿಗಾರಿಕೆ ಬಗ್ಗೆ ಸಭೆ ನಡೆಸಲಿದ್ದಾರೆ. ಈ ಮೂಲಕ 'ಮಂಡ್ಯವನ್ನು ಮರೆತೇ ಬಿಟ್ಟಿದ್ದಾರಾ' ಎನ್ನುವ ಪ್ರಶ್ನೆಗೆ ಸಂಸದೆ ಜಿಲ್ಲಾ ಪ್ರವಾಸ ಮಾಡುವ ಮೂಲಕ ತಿರುಗೇಟು ನೀಡಲು ಮುಂದಾಗಿದ್ದಾರೆ.

ಮೊದಲು ತಿಂಗಳಿಗೊಮ್ಮೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದ ಸಂಸದೆ, ಇದೀಗ ವಾರದಲ್ಲಿ ಎರಡು ಬಾರಿ ಕ್ಷೇತ್ರ ಪ್ರವಾಸ ಮಾಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ.

ಇದನ್ನೂ ಓದಿ:ಸುಮಲತಾ ಅಕ್ಕ ಬನ್ನಿ.. ಅಕ್ರಮ ಗಣಿಗಾರಿಕೆ ನಿಲ್ಲಿಸಿ.. ಸಂಸದೆಗೆ ಸುರೇಶ್​ಗೌಡ ಆಹ್ವಾನ

ABOUT THE AUTHOR

...view details