ಕರ್ನಾಟಕ

karnataka

ETV Bharat / state

ಧಾರವಾಡ ಪೇಡ, ಮೈಸೂರು ಪಾಕ್‌ನಂತೆ ಮಂಡ್ಯ ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ ಸಿಗಬೇಕು: ಸುಮಲತಾ

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆ ಅಡಿ ಜಿಲ್ಲೆಯಲ್ಲಿನ ಆಲೆಮನೆಗಳ ಪುನಶ್ಚೇತನದೊಂದಿಗೆ ಮಂಡ್ಯ ಬೆಲ್ಲಕ್ಕೆ ಉತ್ತೇಜನ ನೀಡುವ ಅಗತ್ಯವಿದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸುವ ಬೆಲ್ಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಎಲ್ಲಾ ಅವಕಾಶಗಳಿವೆ ಎಂದು ಸಂಸದೆ ಸುಮಲತಾ ಅಂಬರೀಶ್​​ ಹೇಳಿದರು.

By

Published : Jan 29, 2021, 3:21 PM IST

MP Sumalata Ambarish
ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಬೆಲ್ಲಕ್ಕೆ ಬ್ರ್ಯಾಂಡ್‌ ರೂಪ ನೀಡುವಲ್ಲಿ ನಾವು ಸೋತಿದ್ದೇವೆ. ಧಾರವಾಡ ಪೇಡ, ಮೈಸೂರು ಪಾಕ್‌ನಂತೆ ಮಂಡ್ಯ ಬೆಲ್ಲ ಎಂಬ ಬ್ರ್ಯಾಂಡ್‌ ರೂಪ ಸಿಗಬೇಕು. ಅದಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಬೆಲ್ಲ ಉತ್ಪಾದನೆಗೆ ಆದ್ಯತೆ ನೀಡಬೇಕು ಸಂಸದೆ ಸುಮಲತಾ ಅಂಬರೀಶ್‌ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆ ಅಡಿ ಜಿಲ್ಲೆಯಲ್ಲಿ ಆಲೆಮನೆಗಳ ಪುನಶ್ಚೇತನದೊಂದಿಗೆ ಮಂಡ್ಯ ಬೆಲ್ಲಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದಿದ್ದಾರೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡ್ಯ ಜಿಲ್ಲೆಯ ಆಲೆಮನೆಗಳ ಪುನಶ್ಚೇತನ ಕೈಗೊಳ್ಳುವ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದರು.

ಈ ವೇಳೆ ಸಣ್ಣ ಲಾಭಗಳ ಬಗ್ಗೆ ಯೋಚಿಸುವುದರಿಂದ ಪ್ರಯೋಜನವಿಲ್ಲ. ಬ್ರಾಂಡಿಂಗ್‌, ಪ್ರಮೋಟಿಂಗ್‌, ಮಾರ್ಕೆಟಿಂಗ್‌ನೊಂದಿಗೆ ರೈತರಿಗೆ ದೊಡ್ಡಮಟ್ಟದ ಲಾಭ ದೊರಕುವಂತೆ ಮಾಡಬೇಕು. ಯೂರೋಪ್‌ ದೇಶಗಳಲ್ಲಿ 1 ಕೆಜಿ ಬೆಲ್ಲಕ್ಕೆ 1 ಸಾವಿರದವರೆಗೂ ಬೆಲೆ ಇದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸುವ ಬೆಲ್ಲಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಎಲ್ಲಾ ಅವಕಾಶಗಳಿವೆ ಎಂದರು.

ಇದನ್ನೂ ಓದಿ:ಆತ್ಮನಿರ್ಭರ ಯೋಜನೆಯಡಿ ಆಲೆಮನೆಗಳ ಪುನಶ್ಚೇತನ: ಸಚಿವ ಎಸ್‌.ಟಿ.ಸೋಮಶೇಖರ್

ABOUT THE AUTHOR

...view details