ಕರ್ನಾಟಕ

karnataka

ETV Bharat / state

ಇನ್ನೆರಡು ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಘೋಷಣೆ: ಸಚಿವ ಅಶೋಕ್ ಭರವಸೆ - ಶಾಸಕ ರವೀಂದ್ರ ಶ್ರೀಕಂಠಯ್ಯ ಗೆ ಟಾಂಗ್

ನೆರೆ ಸಂತ್ರಸ್ತರಿಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಲಿದೆ ಎಂದು ಕಂದಾಯ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ರು.

ಕಂದಾಯ ಸಚಿವ ಆರ್. ಅಶೋಕ್

By

Published : Oct 3, 2019, 10:49 PM IST

Updated : Oct 3, 2019, 11:07 PM IST

ಮಂಡ್ಯ: ನೆರೆ ಸಂತ್ರಸ್ತರಿಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ರು.

ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ದೆಹಲಿಯಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆದಿದೆ. ರಾಜ್ಯದ ಹಿರಿಯ ಐಎಸ್‌ ಅಧಿಕಾರಿಗಳ ತಂಡ ಸಭೆಯಲ್ಲಿ ಪಾಲ್ಗೊಂಡಿದೆ. ಇನ್ನೆರಡು ದಿನಗಳಲ್ಲಿ ಕೇಂದ್ರ ಪರಿಹಾರ ಘೋಷಣೆ ಮಾಡಲಿದೆ ಎಂದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ

ಜಿಲ್ಲೆಯ ರೈತರ ರಕ್ಷಣೆಗೆ ಸರ್ಕಾರ ಬದ್ಧ. ನಾಳೆ ರೈತರ ಜತೆ ಸಭೆ ನಡೆಸುತ್ತೇನೆ. ಕಬ್ಬು ನುರಿಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ‌. ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಕುರಿತು ರೈತರೊಂದಿಗೆ ಸಂವಾದ ಮಾಡುತ್ತಿರೋದಾಗಿ ಸಚಿವರು ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಯಾವುದೋ ಶಾಸಕ, ಸಚಿವರ ಹಬ್ಬ ಅಲ್ಲ. ಇದು ಜನರ ಹಬ್ಬ. ದೇವರ ದರ್ಶನಕ್ಕೆ ಕೇಳಿಕೊಂಡು ಬರಬೇಕಾ? ನಾನು ಮೊದಲ ಬಾರಿ ಆಯ್ಕೆಯಾದ ಶಾಸಕನಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಇದೇ ವೇಳೆ ಟಾಂಗ್ ನೀಡಿದರು.

Last Updated : Oct 3, 2019, 11:07 PM IST

ABOUT THE AUTHOR

...view details