ಕರ್ನಾಟಕ

karnataka

ETV Bharat / state

ವಾರದ ನಂತರ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ... ಮಂಡ್ಯದಲ್ಲಿ ಸರಣಿ ಸಭೆ

ಮದ್ದೂರು ತಾಲೂಕು ಕಚೇರಿಯಲ್ಲಿ ಮೊದಲ ಸಭೆ ಮಾಡಿದ ನಾರಾಯಣಗೌಡ, ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು. ಮದ್ದೂರು ನಂತರ ಮಳವಳ್ಳಿಗೆ ತೆರಳಿ ಅಲ್ಲಿಯೂ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ನಿಯಂತ್ರಣ ಕುರಿತು ಮಾಹಿತಿ ಕಲೆ ಹಾಕಿದರು.

ವಾರದ ನಂತರ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ
ವಾರದ ನಂತರ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ

By

Published : Apr 22, 2020, 2:26 PM IST

ಮಂಡ್ಯ: ವಾರಗಳ ನಂತರ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ನಾರಾಯಣ ಗೌಡ, ಮದ್ದೂರು, ಮಳವಳ್ಳಿ ಹಾಗೂ ಮಂಡ್ಯದಲ್ಲಿ ಸರಣಿ ಸಭೆ ಮಾಡಿದ್ದಾರೆ.

ಮದ್ದೂರು ತಾಲೂಕು ಕಚೇರಿಯಲ್ಲಿ ಮೊದಲ ಸಭೆ ಮಾಡಿದ ನಾರಾಯಣಗೌಡ, ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು. ಮದ್ದೂರು ನಂತರ ಮಳವಳ್ಳಿಗೆ ತೆರಳಿ ಅಲ್ಲಿಯೂ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ನಿಯಂತ್ರಣ ಕುರಿತು ಮಾಹಿತಿ ಕಲೆ ಹಾಕಿದರು. ಮಳವಳ್ಳಿ ನಂತರ ಮಂಡ್ಯಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ಮಾಡಿದ ಸಚಿವರು ಅಧಿಕಾರಿಗಳು ಕೂಡ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ ಕೊಳ್ಳುವಂತೆ ಸಲಹೆ ನೀಡಿ ಧೈರ್ಯ ತುಂಬಿದರು.

ಮದ್ದೂರು ತಾಲೂಕು ಕಚೇರಿಯಲ್ಲಿ ಮೊದಲ ಸಭೆ ಮಾಡಿದ ನಾರಾಯಣಗೌಡ

ಮಾಧ್ಯಮಗಳ ಜೊತೆ ಮಾತನಾಡಿ, ಕೊರೊನಾ ವಿಶ್ವದಲ್ಲೇ ದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಎಷ್ಟೋ ಜನ ಅಧಿಕಾರಿಗಳು ತಮ್ಮ ತಂದೆ - ತಾಯಿಯನ್ನು ನೊಡುವುದಕ್ಕೆ ಆಗುತ್ತಿಲ್ಲ. ಜಿಲ್ಲಾಡಳಿತ, ಪೊಲೀಸ್​ ಇಲಾಖೆ, ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾದರಾಯನಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿ, ಅದು ತುಂಬಾ ತಪ್ಪು, ಅವರಿಗೆ ನಮ್ಮ ಅಧಿಕಾರಿಗಳು ಶಿಕ್ಷೆ ಕೊಟ್ಟಿದ್ದಾರೆ. ಇಡೀ ಕರ್ನಾಟಕವೇ ಪೊಲೀಸರ ನಡೆ ಮೆಚ್ಚಿದೆ. ಎಂದ ಅವರು, ಮಂಡ್ಯ ಜಿಲ್ಲಾದ್ಯಂತ ಇರುವ ಆಶಾ ಕಾರ್ಯಕರ್ತೆಯರಿಗೆ ಏನು ಸೌಲಭ್ಯ ಸಿಗಬೇಕೊ ಅದನ್ನು ಒದಗಿಸುವ ಕೆಲಸ ಮಾಡ್ತೀನಿ ಎಂದರು.

ABOUT THE AUTHOR

...view details