ಮಂಡ್ಯ: ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ನಲ್ಲಿದ್ದ ಯಂತ್ರಗಳ ಸಾಗಣೆಗೆ PSSK ಮಾಜಿ ನೌಕರರು ಮುಂದಾಗಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ? ಅಥವಾ PSSK ಗುತ್ತಿಗೆ ಪಡೆದಿರುವ ಸಚಿವ ನಿರಾಣಿ ಮೈಶುಗರ್ ಲೂಟಿಗೆ ಮುಂದಾದ್ರ? ಎನ್ನುವ ಪ್ರಶ್ನೆ ಮೂಡಿದೆ.
ಜಯರಾಂ, ಕರವೇ ಜಿಲ್ಲಾಧ್ಯಕ್ಷ ಮಾತನಾಡಿದರು ಮೈಶುಗರ್ ಹಗಲು ದರೋಡೆಗೆ ಮುಂದಾದ್ರ ಮಾಜಿ ನೌಕರರು..?
ಹೌದು, ಸಕ್ಕರೆ ನಾಡು ಮಂಡ್ಯ ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಸಾಕಷ್ಟು ಚರ್ಚೆ, ಹೋರಾಟಗಳು ನಡೆದುಕೊಂಡು ಬರ್ತಿವೆ. ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೆ ನಡೆಯಬೇಕು ಎಂಬ ನಿಟ್ಟಿನಲ್ಲಿ ಹಲವಾರು ಹೋರಾಟ ನಡೆಸಿದರು. ಅದರಂತೆ ಸರ್ಕಾರದ ಅಧೀನದಲ್ಲಿ ಇರುವಂತಹ ಕಾರ್ಖಾನೆಯಲ್ಲಿ ಇದೀಗ ಹಗಲು ದರೋಡೆ ಶುರುವಾಗಿದೆ. ಸಚಿವ ನಿರಾಣಿ ಗುತ್ತಿಗೆ ಪಡೆದಿರುವ ಪಾಂಡವಪುರ ಶುಗರ್ ಕಾರ್ಖಾನೆಗೆ ಸುಮಾರು 25 ಲಕ್ಷ ಮೌಲ್ಯದ ಟರ್ಬೈನ್ ಗವರ್ನರ್ ಯಂತ್ರ ರವಾನೆ ಮಾಡಲು ಮೈಶುಗರ್ ಕಾರ್ಖಾನೆ ಮಾಜಿ ನೌಕರರು ಮುಂದಾಗಿದ್ದರು. ಈ ವೇಳೆ, PSSK ವಾಹನಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಮೈಶುಗರ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದ್ರು.
ಮೈಶುಗರ್ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿದರು ಮೈಶುಗರ್ ಕಾರ್ಖಾನೆಯನ್ನ ಸರ್ಕಾರ ಹಾಗೂ ಆಡಳಿತ ಮಂಡಳಿ ಮೇಲಕ್ಕೆ ಎಳದ ರೀತಿ ಮಾಡಲು ಮುಂದಾಗಿದ್ದಾರೆ. ರೈತರು ಕಾರ್ಖಾನೆ ಯಾವಾಗ ಪ್ರಾರಂಭ ಆಗುತ್ತೆ? ಯಾವ ಸರ್ಕಾರ ಪ್ರಾರಂಭ ಮಾಡುತ್ತೆ ಎಂದು ಕಾದುಕುಳಿತ್ತಿದ್ದಾರೆ. ಆದರೆ, ಸಚಿವ ನಿರಾಣಿ PSSKಗೆ ಬೇಕಾಗಿರುವ ಯಂತ್ರಗಳನ್ನ ಮೈಶುಗರ್ ಕಾರ್ಖಾನೆಯಿಂದ ದರೋಡೆ ಮಾಡುವ ಕೆಲಸ ಹಲವು ತಿಂಗಳಿಂದ ನಡೆಯುತ್ತಿದೆ. ಸರ್ಕಾರ ಮೈಶುಗರ್ ದರೋಡೆ ವಿಚಾರದಲ್ಲಿ ಕ್ರಮ ವಹಿಸುವಂತೆ ಹೋರಾಟಗಾರರು ಒತ್ತಾಯಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಮೈಶುಗರ್ ಅಧ್ಯಕ್ಷ ಶಿವಲಿಂಗೇಗೌಡ ಆಗಮಿಸಿ PSSK ನೌಕರರನ್ನ ವಿಚಾರಣೆ ನಡೆಸಿದ್ರು. ನಮ್ಮದು ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಖರೀದಿ, ಮಾರಾಟ, ಸಾಗಾಣಿಕೆಗೆ ನಿಯಮಗಳಿವೆ. ಪಿಎಸ್ಎಸ್ಕೆ ಕಾರ್ಖಾನೆಯವರು ನಮ್ಮ ಕಾರ್ಖಾನೆಗೆ ಬಂದಿದ್ದೇ ತಪ್ಪು. ನಮ್ಮಿಂದ ಯಾವುದೇ ಅನುಮತಿ ಪಡೆಯದೆ ಯಂತ್ರ ಪರಿಶೀಲಿಸಿದ್ದಾರೆ. ಇದು ಅಪರಾಧ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಹಾಗಾಗಿ, ಪೊಲೀಸರಿಗೆ ದೂರು ಕೊಡಿಸುತ್ತೇನೆ. ಪೊಲೀಸರು ತನಿಖೆ ಮಾಡಿ, ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಮೈಶುಗರ್ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿದರು ಒಟ್ಟಾರೆ, ಮೈಶುಗರ್ ಕಾರ್ಖಾನೆ ಪ್ರಾರಂಭದ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಆದ್ರೆ PSSK ಕಾರ್ಖಾನೆಯವರು ಯಾವುದೇ ಅನುಮತಿ ಪಡೆಯದೇ ಯಂತ್ರ ತರಲು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದೆ ಸಚಿವ ನಿರಾಣಿ ಕೈವಾಡ ಇದ್ಯಾ ಅನ್ನೊ ಪ್ರಶ್ನೆ ಮೂಡಿದರೆ, ಸರ್ಕಾರ ಈ ಬಗ್ಗೆ ಯಾವ ರೀತಿ ಕ್ರಮ ವಹಿಸಿ ಮೈಶುಗರ್ ಉಳಿಸಲು ಮುಂದಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಓದಿ:ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಮಾಗಡಿ ಶಾಸಕ ಮಂಜುನಾಥ್ 'ಭೂ ಕಬಳಿಕೆ' ಆರೋಪ