ಕರ್ನಾಟಕ

karnataka

ETV Bharat / state

ಹೆಚ್‌ಡಿಕೆ ಸಿಎಂ ಆಗಿದ್ದಾಗ ಕೇಳಿದಷ್ಟು ಅನುದಾನ ಕೊಡದ ಕಾರಣ ರಾಜೀನಾಮೆ ನೀಡಿದೆ- ನಾರಾಯಣಗೌಡ

ಜೆಡಿಎಸ್‌ ಅನರ್ಹ ಶಾಸಕ ನಾರಾಯಣಗೌಡ ರಾಜೀನಾಮೆ ನಂತರ ಮೊದಲ ಬಾರಿಗೆ ಕೆಆರ್‌ಪೇಟೆ ಕ್ಷೇತ್ರಕ್ಕೆ ಆಗಮಿಸಿದ್ದು, ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಕೆ.ಆರ್.ಪೇಟೆ ಕ್ಷೇತ್ರಕ್ಕೆ ರೆಬೆಲ್ ಶಾಸಕ ನಾರಾಯಣಗೌಡ

By

Published : Aug 12, 2019, 1:19 PM IST

ಮಂಡ್ಯ: ಜೆಡಿಎಸ್‌ನ ಅನರ್ಹ ಶಾಸಕ ನಾರಾಯಣಗೌಡ ರಾಜೀನಾಮೆ ಕೊಟ್ಟ ನಂತರ ಮೊದಲ ಬಾರಿಗೆ ಕೆಆರ್‌ಪೇಟೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗೆ ಹಣ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದನ್ನು ತಡೆಯಲಾಗದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಅನರ್ಹ ಶಾಸಕ ನಾರಾಯಣಗೌಡ ರಾಜೀನಾಮೆಗೆ ಕೊಟ್ಟ ಕಾರಣ..

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಇವರಿಗೆ ಅಭಿಮಾನಿಗಳು ಸಂಭ್ರಮದಿಂದ ಹೂಮಾಲೆ ಹಾಕಿ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗೆ ಹಣ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದನ್ನು ತಡೆಯಲಾಗದೇ ಮನನೊಂದು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.‌ ಹೊರಗಿನ ಬಾಡಿಗೆ ಜನರನ್ನು ಕರೆಸಿ ನನ್ನನ್ನು ಬಹಿರಂಗವಾಗಿ ಬೈಯ್ದು ಸಂತೋಷ ಪಟ್ಟಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ನಾನು ಆಸೆ ಆಮಿಷಗಳಿಗೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ತಾಲೂಕಿನ ಓರ್ವ ಪುತ್ರ ಸಿಎಂ ಆಗಿದ್ದಾರೆ ಎಂಬ ಖುಷಿ ಇದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುವ ನಿರೀಕ್ಷೆ ಇದೆ ಎಂದರು. ನಾನು ತಾಲೂಕಿನ ಅಭಿವೃದ್ಧಿಗೆ 700 ಕೋಟಿ ರೂಪಾಯಿ ಅನುದಾನ ಕೇಳಿದ್ದೆ. ಆದರೆ, ತಾರತಮ್ಯ ಮಾಡಿದರು. ಪಕ್ಕದ ಕ್ಷೇತ್ರ, ಹೊಳೆನರಸೀಪುರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಇದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಮತ್ತೊಮ್ಮೆ ಪ್ರೆಸ್‌ಮೀಟ್ ಮಾಡುವೆ ಎಂದು ಹೇಳಿದರು.

ABOUT THE AUTHOR

...view details