ಕರ್ನಾಟಕ

karnataka

ETV Bharat / state

ಶಾಸಕ ಪ್ರೀತಮ್ ಗೌಡ ಚಿಕ್ಕವರು, ಇತಿಮಿತಿಯಲ್ಲಿ ಇರಬೇಕು: ವಿ. ಸೋಮಣ್ಣ - ಮಂಡ್ಯ

ಶಾಸಕ ಪ್ರೀತಮ್ ಗೌಡ ಚಿಕ್ಕವರು, ಅವರು ಇತಿಮಿತಿಯಲ್ಲಿರಬೇಕು ಎಂದು ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

v somanna
ಸಚಿವ ವಿ ಸೋಮಣ್ಣ

By

Published : Aug 10, 2021, 10:14 AM IST

ಮಂಡ್ಯ: ಪ್ರೀತಮ್ ಗೌಡ ಒಂದು ಬಾರಿ ಎಂಎಲ್ಎ ಆದ ತಕ್ಷಣಕ್ಕೆ ದೇವರಲ್ಲ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಚಿವ ವಿ. ಸೋಮಣ್ಣ ಹಾಸನದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಚಿವ ವಿ ಸೋಮಣ್ಣ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ. ದೇವೇಗೌಡರ ಕುಟುಂಬಕ್ಕೆ 50 ವರ್ಷ ರಾಜಕೀಯದ ಇತಿಹಾಸವಿದೆ. ಅವರು ರಾಷ್ಟ್ರದ ಪ್ರಧಾನಿಗಳಾಗಿದ್ದವರು. ನಾನು ಕೂಡ ದೇವೇಗೌಡರ ಮನೆಗೆ ಹೋಗಿದ್ದೆ ಎಂದರು.

ಶಾಸಕ ಪ್ರೀತಂ ಗೌಡ ಅಸಮಾಧಾನವೇನು? ಸೋಮಣ್ಣ ಗರಂ ಆಗಿದ್ದೇಕೆ?

ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿ ಆಶೀರ್ವಾದ ಪಡೆದಿದ್ದರು. ಈ ಕಾರಣಕ್ಕೆ ಸ್ವಪಕ್ಷೀಯ ಶಾಸಕರೇ ಆಗಿರುವ ಹಾಸನ ಶಾಸಕ ಪ್ರೀತಮ್ ಗೌಡ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಮುಂದಿನ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾದರೂ ಅದಕ್ಕೆ ಸಿಎಂ ಬೊಮ್ಮಾಯಿ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ಕಿಡಿ ಕಾರಿದ್ದರು. ಈ ವಿಚಾರವಾಗಿ ಹಲವು ರಾಜಕಾರಣಿಗಳು ಪ್ರತಿಕ್ರಿಯೆ ನೀಡಿದ್ದು, ಇದೀಗ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾತೆ ಹಂಚಿಕೆ ಅಸಮಾಧಾನ ವಿಚಾರ

ಖಾತೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಬಸವರಾಜ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ ಎಂದು ಹೇಳಿದರು.

ಇದನ್ನೂ ಓದಿ:1947ರಲ್ಲಿ ಅವರು ಹುಟ್ಟಿರಲಿಲ್ಲ, ನಮ್ಮ ಪಕ್ಷದ ಬಗ್ಗೆ ಅವರ‍್ಯಾಕೆ ಮಾತನಾಡ್ತಾರೆ ಗೊತ್ತಿಲ್ಲ: ಪ್ರೀತಮ್ ಗೌಡ

'ಆಗಸ್ಟ್‌ 15 ರಂದು ಜನಪರ ಯೋಜನೆ ಘೋಷಣೆ'

ಆಗಸ್ಟ್ 15ರಂದು ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮ ಘೋಷಣೆ ಮಾಡ್ತಾರೆ. 15 ರಿಂದ 20 ದಿವಸದಲ್ಲಿ ಸರ್ಕಾರ ಟೇಕ್​ ಆಫ್ ಆಗಿದೆ ಎಂಬ ಭಾವನೆ ನಿಮಗೆ ಬರುತ್ತದೆ ಎಂದು ವಿ.ಸೋಮಣ್ಣ ತಿಳಿಸಿದರು.

ABOUT THE AUTHOR

...view details