ಮಂಡ್ಯ: ಜೆಡಿಎಸ್ ಪಕ್ಷವನ್ನು ಹಳ್ಳ ಹಿಡಿಸಲು ಸಿ.ಎಂ ಇಬ್ರಾಹಿಂ ಇಂತಹ ಹೇಳಿಕೆ ನೀಡ್ತಿದ್ದಾರೆ. ಅವರಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಕೊಟ್ಟರೆ ಕರ್ನಾಟಕದಲ್ಲಿ ಅಡ್ರಸ್ ಇಲ್ಲದಂಗೆ ಕಳುಹಿಸುತ್ತಾರೆ ಎಂದು ಮದ್ದೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದರು.
ಇನ್ನೊಂದು ಬಾರಿ ಟಿಪ್ಪು ಬೆಂಬಲಿಸಿ ಹೇಳಿಕೆ ಕೊಟ್ಟರೆ ಅಡ್ರಸ್ ಇಲ್ಲದಂಗೆ ಆಗುತ್ತೆ. ಇಂತಹ ಹೇಳಿಕೆ ಆಧಾರದ ಮೇಲೆ ಜನರು ಚುನಾವಣೆಯಲ್ಲಿ ಉತ್ತರ ಕೊಡ್ತಾರೆ. ಟಿಪ್ಪು ಬೇಕಾ ಅಥವಾ ನಾಲ್ವಡಿ ಬೇಕಾ ಎಂಬ ಸ್ಪಷ್ಟ ಸಂದೇಶವನ್ನು ಜನರು ಕೊಡ್ತಾರೆ. ತುಷ್ಠೀಕರಣದ ರಾಜಕಾರಣ ಮಾರ್ಗ ದೇಶದಲ್ಲಿ ಮಾಯವಾಗಿದೆ ಎಂದರು.
ಬಿಎಸ್ವೈ ಬಗ್ಗೆ ಅಪಾರ ಅಭಿಮಾನವಿದೆ:ಬಿಜೆಪಿ ಬಿಎಸ್ವೈಗೆ ಕಣ್ಣೀರು ಹಾಕಿಸಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಪಕ್ಷ ಬೆಳೆಸುವ ಜೊತೆಗೆ ಅವರು ಬೆಳೆದು ನಾಯಕರಾಗಿದ್ದಾರೆ. ಅವರು ನಮ್ಮ ನಾಯಕರು. ಅವರಿಗೆ ಬಿಜೆಪಿ ಬಗ್ಗೆ ಅಪಾರ ಕಾಳಜಿ, ಅಭಿಮಾನವಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಕೆಲಸ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ :ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲೇ ಎಂದು ಬಿಜೆಪಿ ನಾಯಕರು ಘೋಷಣೆ ಮಾಡಲಿ: ಡಿಕೆಶಿ ಸವಾಲು