ಮಂಡ್ಯ:ಪುಲ್ವಾಮಾ ದಾಳಿಯ ಕರಾಳ ದಿನಕ್ಕೆ ಇಂದು ಎರಡು ವರ್ಷ ತುಂಬಿದ್ದು, ದಾಳಿಯಲ್ಲಿ ಬಲಿಯಾದ ಮಂಡ್ಯದ ಯೋಧ ಗುರು ಅವರ ಪುಣ್ಯ ಸ್ಮರಣೆ ಇಂದು ನೆರವೇರಿತು.
ಮಂಡ್ಯ: ಹುತಾತ್ಮ ಯೋಧ ಗುರುವಿನ 2ನೇ ವರ್ಷದ ಪುಣ್ಯಸ್ಮರಣೆ - soldier guru death anniversary
ಪುಲ್ವಾಮಾ ದಾಳಿಯಲ್ಲಿ ಬಲಿಯಾದ ಮಂಡ್ಯದ ಯೋಧ ಗುರು ಅವರ 2ನೇ ವರ್ಷದ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು.
ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ಗುರು ಸಮಾಧಿ ಬಳಿ 2ನೇ ವರ್ಷದ ಪುಣ್ಯಸ್ಮರಣೆ ನೆರವೇರಿಸಲಾಯಿತು. ಸಂಬಂಧಿಕರು, ಸ್ನೇಹಿತರು ಸಮಾಧಿ ಹಾಗೂ ಮೃತ ಗುರುವಿನ ಮೇಲೆ ಇಡಲಾಗಿದ್ದ ತ್ರಿವರ್ಣ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ಒಂದು ವರ್ಷದಲ್ಲಿ ಸ್ಮಾರಕ ನಿರ್ಮಿಸುವುದಾಗಿ ಜಿಲ್ಲಾಡಳಿತ ಮಾತು ಕೊಟ್ಟಿತ್ತು. ಆದ್ರೆ 2 ವರ್ಷವಾದರೂ ಸ್ಮಾರಕ ನಿರ್ಮಾಣವಾಗದ ಹಿನ್ನೆಲೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಕೆಎಂ ದೊಡ್ಡಿ ಮುಖ್ಯ ರಸ್ತೆ ಬಳಿ ಸ್ಮಾರಕಕ್ಕಾಗಿ 6 ಗುಂಟೆ ಜಾಗದಲ್ಲಿ ಗುರುವಿನ ಚಿತಾಭಸ್ಮ ಹಾಗೂ ಅಂತ್ಯಕ್ರಿಯೆಗೆ ಬಳಸಿದ್ದ ವಸ್ತುಗಳು ಅಲ್ಲಿಯೇ ಇವೆ.