ಮಂಡ್ಯ: ಹುತಾತ್ಮ ಯೋಧ ಗುರುವಿನ ಸಾವಿನ ಸುದ್ದಿ ಕೇಳಿ ಅವರ ಚಿಕ್ಕಮ್ಮ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುತಾತ್ಮ ಯೋಧ ಗುರುವಿನ ಚಿಕ್ಕಮ್ಮ ಅಸ್ವಸ್ಥ...ಆಸ್ಪತ್ರೆಗೆ ದಾಖಲು - ಚಿಕ್ಕಮ್ಮ ತೀವ್ರ ಅಸ್ವಸ್ಥ
ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮನಾದ ಯೋಧ ಗುರು ಅವರ ಚಿಕ್ಕಮ್ಮ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಕಲಿಸಲಾಗಿದೆ.
ತೀವ್ರ ಅಸ್ವಸ್ಥರಾದ ಭಾಗ್ಯಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.
ಯೋಧ ಗುರು ಅವರ ತಾಯಿಯ ಸಹೋದರಿ ಭಾಗ್ಯಮ್ಮ ಎಂಬವರು ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಯೋಧನ ಸಾವಿನ ನಂತರ ಮನೆಯವರು, ಸಂಬಂಧಿಗಳು ಸರಿಯಾಗಿ ಆಹಾರ ಸೇವನೆ ಮಾಡದಿರುವುದ ರಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಸ್ಥಳದಲ್ಲೇ ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಹೀಗಾಗಿ ಗ್ರಾಮಸ್ಥರು ಕೂಡಲೇ ಭಾಗ್ಯಮ್ಮರನ್ನು ಆಸ್ಪತ್ರೆಗೆ ದಾಖಲು ಮಾಡಿದರು.