ಕರ್ನಾಟಕ

karnataka

ETV Bharat / state

ದೆಹಲಿ ಸಮ್ಮೇಳನಕ್ಕೆ ಮಂಡ್ಯದ ಕೃಷಿ ಸಂಶೋಧಕ ಆಯ್ಕೆ

ಜುಲೈ 17ರಿಂದ 3 ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನಕ್ಕೆ ಜಿಲ್ಲೆಯ ರೈತ ಸಂಶೋಧಕರು ಆಯ್ಕೆಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿಯ ರೋಬೋ ಮಂಜೇಗೌಡ ಆಯ್ಕೆಯಾಗಿದ್ದು, ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.

ದೆಹಲಿ ಸಮ್ಮೇಳನಕ್ಕೆ ಜಿಲ್ಲೆಯ ಸಂಶೋಧಕ

By

Published : Jul 15, 2019, 8:49 PM IST

ಮಂಡ್ಯ:ಜುಲೈ 17ರಿಂದ 3 ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನಕ್ಕೆ ಜಿಲ್ಲೆಯ ರೈತ ಸಂಶೋಧಕರು ಆಯ್ಕೆಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿಯ ರೋಬೋ ಮಂಜೇಗೌಡ ಆಯ್ಕೆಯಾಗಿದ್ದು, ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.

ದೆಹಲಿ ಸಮ್ಮೇಳನಕ್ಕೆ ಜಿಲ್ಲೆಯ ಸಂಶೋಧಕ

ಸಮ್ಮೇಳನದಲ್ಲಿ ತಾವು ಸಂಶೋಧನೆ ಮಾಡಿರುವ ವಿದ್ಯುತ್ ರಹಿತ ವಾಟರ್ ಪಂಪ್, ಸಸಿಗಳನ್ನು ನೆಡುವ ಯಂತ್ರ ಹಾಗೂ ಬೆಳೆಗಳಿಗೆ ನೀರು ನಿರ್ವಹಣೆ ಮಾಡುವ ತಂತ್ರಜ್ಞಾನ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಸಮ್ಮೇಳನಕ್ಕೆ ಹೋಗಿರುವ ರೈತ ಸಂಶೋಧಕ ರೋಬೋ ಮಂಜೇಗೌಡರನ್ನು ಹಿತೈಷಿಗಳು ಹಾಗೂ ರೈತರು ಅಭಿನಂದನೆ ಸಲ್ಲಿಸಿ ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ. ಸಮ್ಮೇಳನದಲ್ಲಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮಂಜೇಗೌಡ ಹಾರಿಸಲಿದ್ದಾರೆ.

ಮಂಜೇಗೌಡರ ಸಂಶೋಧನೆಗೆ ಈಗಾಗಲೇ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಸಮ್ಮೇಳನಕ್ಕೆ ಹೋಗುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

ABOUT THE AUTHOR

...view details