ಕರ್ನಾಟಕ

karnataka

ETV Bharat / state

ಜೆಡಿಎಸ್ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಶಾಸಕ..​ ಇಂದು ಪಕ್ಷೇತರನಾಗಿ ಎಂ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ - ಈಟಿವಿ ಭಾರತ ಕನ್ನಡ

ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿಯಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಶಾಸಕ ಎಂ ಶ್ರೀನಿವಾಸ್
ಶಾಸಕ ಎಂ ಶ್ರೀನಿವಾಸ್

By

Published : Apr 20, 2023, 10:24 AM IST

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಗೊಂದಲವನ್ನು ನಿವಾರಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಶಾಸಕ ಸಿ ಎಸ್ ಪುಟ್ಟರಾಜು ಪರಮಾಪ್ತ ಮನ್ಮುಲ್ ಅಧ್ಯಕ್ಷ ಬಿ ಆರ್ ರಾಮಚಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಅಲ್ಲದೇ ಅಭ್ಯರ್ಥಿ ರಾಮಚಂದ್ರ ಅವರಿಗೆ ಹೆಚ್​ ಡಿ ದೇವೇಗೌಡ್ರು ಬಿ ಫಾರಂ ಕೂಡ ವಿತರಣೆ ಮಾಡಿದ್ದಾರೆ. ಈ ಮೂಲಕ ಹಾಲಿ ಶಾಸಕ ಎಂ.ಶ್ರೀನಿವಾಸ್ ಹಾಗೂ ಅವರ ಅಳಿಯ ಟಿಕೆಟ್​ ಆಕಾಂಕ್ಷಿ ಯೋಗೇಶ್ ಅವರಿಗೆ ಟಿಕೆಟ್ ತಪ್ಪಿದೆ. ಮಂಡ್ಯ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗೆ ಮಣೆ ಹಾಕಿರುವ ಜೆಡಿಎಸ್​ ವಿರುದ್ಧ ಟಿಕೆಟ್​ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.

ಶಾಸಕ ಎಂ. ಶ್ರೀನಿವಾಸ್​ ಅವರಿಗೆ ಜೆಡಿಎಸ್ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ಮಂಡ್ಯದಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ಅವರ ಬೆಂಬಲಿಗರು ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ವಿರುದ್ಧವೂ ಧಿಕ್ಕಾರ ಕೂಗಿದ್ದಾರೆ. ಮಂಡ್ಯದ ಅಶೋಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಎಂ ಶ್ರೀನಿವಾಸ್​ ಬೆಂಬಲಿಗರೊಂದಿಗೆ ಸಭೆ ನಡೆಸಿ, ಮಂಡ್ಯದ ಜೆಡಿಎಸ್ ಟಿಕೆಟ್​ ಮಾರಾಟ ಮಾಡಿರೋದಾಗಿ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀನಿವಾಸ್ ಮನೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮಂಜು, ಜಿ.ಪಂ. ಮಾಜಿ ಅಧ್ಯಕ್ಷ ಯೋಗೇಶ್ ಸೇರಿ ಹಲವು ಮುಖಂಡರು ಹಾಗೂ ಬೆಂಬಲಿಗರು ಭಾಗಿಯಾಗಿದ್ದರು.

ಇದನ್ನೂ ಓದಿ:ಜೆಡಿಎಸ್‌ ಜಾತಿವಾರು ಟಿಕೆಟ್ ಹಂಚಿಕೆ ಮಾಹಿತಿ : ಒಕ್ಕಲಿಗರಿಗೆ ಸಿಂಹಪಾಲು

ಇದೇ ವೇಳೆ ಎಂ. ಶ್ರೀನಿವಾಸ್ ಜೆಡಿಎಸ್​ ಪಕ್ಷಕ್ಕೆ ರಾಜೀನಾಮೆಯನ್ನೂ ಘೋಷಣೆ ಮಾಡಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸ್ವಾಭಿಮಾನಿ ಪಡೆ ಹೆಸರಲ್ಲಿ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಶ್ರೀನಿವಾಸ ಬೆಂಬಲಿಗರ ಸಭೆ ಬಳಿಕ​ ತಿಳಿಸಿದ್ದಾರೆ. ಮತ್ತೊಂಡೆದೆ ಇದೇ ಕ್ಷೇತ್ರದ ಜೆಡಿಎಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ವಿಜಯಾನಂದಗೆ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಬೆಂಬಲಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ:ರಾಮನಗರದಲ್ಲಿ ರಂಗೇರಿದ ಚುನಾವಣೆ ಅಖಾಡ: ಅಭ್ಯರ್ಥಿಗಳೆಲ್ಲರೂ ಕರೋಡಪತಿಗಳು.. ಆಸ್ತಿ ವಿವರ ಇಂತಿದೆ

ಒಟ್ಟಾರೆ ಮನ್ಮುಲ್​ ​ಅಧ್ಯಕ್ಷ ರಾಮಚಂದ್ರ ಅವರಿಗೆ ಮಂಡ್ಯ ಕ್ಷೇತ್ರಕ್ಕೆ ಟಿಕೆಟ್​ ಘೋಷಣೆ ಮಾಡಿದ ಹಿನ್ನೆಲೆ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದೆ. ಮೂವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ. ಶಾಸಕ ಎಂ. ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಹಾಗು ವಿಜಯಾನಂದ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಎಂ. ಶ್ರೀನಿವಾಸ್ ತಮ್ಮ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ:ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಬುಧವಾರ ನಾಮಪತ್ರ ಸಲ್ಲಿಸಿದ ಘಟಾನುಘಟಿಗಳ ವಿವರ

ಇದನ್ನೂ ಓದಿ:ಕಾಂಗ್ರೆಸ್ ವಿರುದ್ಧ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಪ್ರಯೋಗ.. ಶಾಸಕ ರೇಣುಕಾಚಾರ್ಯ ಹೀಗಂದ್ರು

ABOUT THE AUTHOR

...view details