ಮಂಡ್ಯ: ಮನ್‌ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಡಿಸಿಎಂ ಅಶ್ವಥ ನಾರಾಯಣ್ ಮೂಲಕ ಆಪರೇಷನ್ ಮಾಡಿದರೂ ಬಿಜೆಪಿಗೆ ಅದೃಷ್ಟ ಕೈ ಕೊಟ್ಟಿದೆ. ಕೊನೆಗೂ ಲಾಟರಿ ಮೂಲಕ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಸದಸ್ಯನಿಗೆ ಮುಖಭಂಗವಾಗಿದೆ.
ಮನ್‌ಮುಲ್ ಅಧಿಕಾರ ಗದ್ದುಗೆ ಅಲಂಕರಿಸಬೇಕು ಎಂದು ಶತಾಯಗತಾಯ ಹೋರಾಟ ನಡೆಸಿದ್ದ ಬಿಜೆಪಿ ಮುಖಂಡರಿಗೆ ಮುಖಭಂಗವಾಗಿದೆ. 16 ಸದಸ್ಯ ಬಲದ ಮನ್‌ಮುಲ್‌ನಲ್ಲಿ ಸಮಬಲ ಉಂಟಾಗಿ ಲಾಟರಿ ಮೂಲಕ ಜೆಡಿಎಸ್‌ನ ರಾಮಚಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಪಿ ಸ್ವಾಮಿಗೆ ಈ ಮೂಲಕ ಭಾರೀ ಹಿನ್ನೆಡೆಯಾಗಿದೆ. ಜೊತೆಗೆ ಉಪಾಧ್ಯಕ್ಷ ಸ್ಥಾನವೂ ಜೆಡಿಎಸ್ ಪಾಲಾಗಿದ್ದು, 9 ಮತ ಪಡೆದು ರಘುನಂದನ್ ಆಯ್ಕೆಯಾಗಿದ್ದಾರೆ.