ಮಂಡ್ಯ: ಮುಂಬೈನಿಂದ ಶವ ತಂದು ಅಂತ್ಯ ಸಂಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಗ್ಯ ಇಲಾಖೆ 14 ಜನರನ್ನು ಕ್ವಾರಂಟೈನ್ಗಾಗಿ ವಶಕ್ಕೆ ಪಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಜಾಗಿನಕೆರೆ ಹಾಗೂ ಸಾರಂಗಿ ಗ್ರಾಮದವರಾಗಿದ್ದು, ಇವರೆಲ್ಲಾ ದ್ವಿತೀಯ ಸಂಪರ್ಕಿತರು ಎಂದು ಹೇಳಲಾಗಿದೆ.

ಈ ಸಂಬಂಧ ಮಾಜಿ ಸಚಿವ ಪುಟ್ಟರಾಜು ಮುಂಬೈನಿಂದ ಶವದ ಜೊತೆ ಮತ್ತೊಬ್ಬರು ಬಂದಿದ್ದರು ಎಂದು ತಿಳಿಸಿದರು. ತಕ್ಷಣ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಎಂಟು ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆಯರನ್ನು ಕ್ವಾರಂಟೈನ್ ಮಾಡಿದ್ದಾರೆ.
ಏಪ್ರಿಲ್ 24ರಂದು ಮುಂಬೈನಲ್ಲಿ ಸಾವಿಗೀಡಾಗಿದ್ದ ಪಾಂಡವಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದ ವ್ಯಕ್ತಿಯ ಶವವನ್ನು ಊರಿಗೆ ತಂದು ಸಂಸ್ಕಾರ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 14 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.