ಮಂಡ್ಯ: ಕ್ವಾರೆಗಳಿಗೆ ಅಕ್ರಮವಾಗಿ ಸ್ಫೋಟಕಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಕ್ವಾರೆಗಳಿಗೆ ಅಕ್ರಮವಾಗಿ ಸ್ಫೋಟಕ ಸಾಗಣೆ: ಕೆ. ಆರ್. ಪೇಟೆಯಲ್ಲಿ ಮೂವರ ಬಂಧನ - stone quarry
ಪಾಂಡವಪುರ ತಾಲೂಕಿನ ಸುತ್ತಮುತ್ತಲ ಕ್ವಾರೆಗಳಿಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕ್ವಾರೆಗಳಿಗೆ ಅಕ್ರಮವಾಗಿ ಸ್ಫೋಟಕ ಸಾಗಾಟ: ಮೂವರ ಬಂಧನ
ಮೌರ್ಯ, ನಿಶಾಂತ್ ಹಾಗೂ ಶ್ರೀಧರ್ ಬಂಧಿತ ಆರೋಪಿಗಳು. ಪಾಂಡವಪುರ ತಾಲೂಕಿನ ಸುತ್ತಮುತ್ತಲ ಕ್ವಾರೆಗಳಿಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನ ಸೇರಿದಂತೆ ವಾಹನದ ಒಳಗಿದ್ದ ಕ್ವಾರೆಗಳಲ್ಲಿ ಬಳಸುವ ಅನಧಿಕೃತ ಸ್ಫೋಟಕ ಜಪ್ತಿ ಮಾಡಿದ್ದು, ಕೆ.ಆರ್. ಪೇಟೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.