ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ನಾನು : ಸಚಿವ ಪುಟ್ಟರಾಜು - ಪುಟ್ಟರಾಜು

ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಸುಮಲತಾ ನನ್ನ ಆತ್ಮಾಭಿಮಾನದ ಪ್ರಶ್ನೆ ಮಾಡೋದು ಬೇಡ. ಜೆಡಿಎಸ್ ಮತ್ತು‌ ಕಾಂಗ್ರೆಸ್ ಪಕ್ಷದವರ ಮೇಲೆ ಬಿಜೆಪಿಯವರು ಐಟಿ ದಾಳಿ ನಡೆಸಿದ್ದಾರೆ. ಅವರಿಗೆ ಧನ್ಯವಾದ ಹೇಳಬೇಕಿದೆ ಎಂದು ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ರು.

ಸಚಿವ ಸಿ ಎಸ್ ಪುಟ್ಟರಾಜು

By

Published : Mar 29, 2019, 3:29 PM IST

ಮಂಡ್ಯ: ಜಿಲ್ಲೆಯಲ್ಲಿ ಅಂಬರೀಶ್​ಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿ ಕುಟುಂಬಕ್ಕೆ ನಾನೇನು ಮಾಡಿದ್ದೇನೆ ಅನ್ನೋದನ್ನ ಅಂಬಿ ಸಮಾಧಿ ಮುಂದೆ ನಿಂತು ಕೇಳಲಿ ಎಂದು ಸಚಿವ ಸಿ.ಎಸ್. ಪುಟ್ಟರಾಜು ಸ್ವತಂತ್ರ ಅಭ್ಯರ್ಥಿ ಸುಮಲತಾ​ಗೆ ಸವಾಲು ಹಾಕಿದ್ದಾರೆ.

ಸಚಿವ ಸಿಎಸ್ ಪುಟ್ಟರಾಜು

ಮಾಧ್ಯಮಗಳೆದುರು ಮಾತನಾಡಿದ ಪುಟ್ಟರಾಜು, ಸುಮಲತಾ ನನ್ನ ಆತ್ಮಾಭಿಮಾನದ ಪ್ರಶ್ನೆ ಮಾಡೋದು ಬೇಡ. ಅಂಬರೀಶ್​ ರಾಮನಗರದಲ್ಲಿ ಸೋತ ಬಳಿಕ ಮಂಡ್ಯಕ್ಕೆ ಕರೆತಂದಿದ್ದು ನಾನು. ನನ್ನ ಮನೆ ದುಡ್ಡು ಹಾಕಿ ಪ್ರಚಾರ ಮಾಡಿದ್ದೆ. ಅವರ ರಾಜಕೀಯ ಏಳಿಗೆಗಾಗಿ ಶ್ರಮಿಸಿದವನು ನಾನು. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ತಾನೇ ಎಂದರು.

ಐಟಿ ದಾಳಿ ರಾಜಕೀಯ ಪ್ರೇರಿತ:

ನಿನ್ನೆ ರಾಜ್ಯದಲ್ಲಿ ಜೆಡಿಎಸ್ ಮತ್ತು‌ ಕಾಂಗ್ರೆಸ್ ಪಕ್ಷದವರ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಹೀಗಾಗಿ ಬಿಜೆಪಿಗರಿಗೆ ಧನ್ಯವಾದ ಹೇಳಬೇಕಿದೆ. ಯಾಕೆಂದ್ರೆ ನಮ್ಮ ನಿಜವಾದ ಬಂಡವಾಳವನ್ನು ಅವರು ತೋರಿಸಿಕೊಟ್ಟಿದ್ದಾರೆ. ನನ್ನನ್ನೇ ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆಸಿದ್ದಾರೆ. ಆದರೆ ಪಾಪ ಐಟಿ ಅಧಿಕಾರಿಗಳಿಗೆ ಏನು ಸಿಗಲಿಲ್ಲ ಎಂದು ಪುಟ್ಟರಾಜು ಗೇಲಿ ಮಾಡಿದರು.

ಅವರಿಗೆ ಸಿಕ್ಕಿರೋದು ನಮ್ಮ ಸಾಲ ಪತ್ರಗಳುಗಳು. ಇದೆಲ್ಲವನ್ನು ತೋರಿಸಿಕೊಟ್ಟ ಬಿಜೆಪಿ ಮತ್ತು ಆ ಪಕ್ಷದ ಅಧ್ಯಕ್ಷ ಅಮಿತ್​ ಶಾ ಅವರಿಗೆ ವಿಶೇಷ ಧನ್ಯವಾದ. ಈ ರೀತಿ ಮಾಡಿ ಕಟ್ಟಿ ಹಾಕಲು ಸಾಧ್ಯವಿಲ್ಲ. ದೇವೇಗೌಡ್ರು ಈ ರಾಷ್ಟ್ರಕ್ಕೆ, ರಾಜ್ಯಕ್ಕೆ ಮಂಡ್ಯಕ್ಕೆ ಏನೇನು ಕೊಟ್ಟಿದ್ದಾರೆ ಅನ್ನೋದು ಇಲ್ಲಿನ ಜನರು ಹೃದಯದಲ್ಲಿ ಬರೆದಿಟ್ಟುಕೊಂಡಿದ್ದಾರೆ. ಈ ರೀತಿಯ ಮೂಲಕ ನಮ್ಮ ಪಕ್ಷದ ವರಿಷ್ಟರನ್ನಾಗಲಿ, ನಮ್ಮನ್ನಾಗಲಿ ಕಟ್ಟಹಾಕಲು ಸಾಧ್ಯವಿಲ್ಲ ಎಂದರು.

ಐಟಿ ನೋಟೀಸ್ ಕೊಟ್ಟಿರೋದು ನಿಜ

ಸಚಿವ ಸಿ ಎಸ್ ಪುಟ್ಟರಾಜು

ನಮ್ಮ ತಾತನ ಕಾಲದಲ್ಲೇ ನಾನು ವ್ಯವಹಾರ ಮಾಡಿದ್ದೀನಿ. ಅಂದಿನಿಂದ ಇಂದಿನವರೆಗೂ ನಾವು ಪ್ರಮಾಣಿಕವಾಗಿ ನಡೆದುಕೊಂಡು‌ ಬಂದಿದ್ದೇವೆ. ನಾವು ರೀತಿಯ ತೆರಿಗೆ ವಂಚಿಸಿಲ್ಲ. ಎಲ್ಲ ತೆರಿಗೆಗಳನ್ನು ಭರಿಸಿದ್ದೇವೆ. ನಿನ್ನೆ ಬಂದ ಐಟಿ ಅಧಿಕಾರಿಗಳು ನಮಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಐಟಿ ನೋಟೀಸ್ ಕೊಟ್ಟಿರೋದು ನಿಜ. ಸೋಮವಾರ ಕಚೇರಿಗೆ ಬರುವಂತೆ ಹೇಳಿದ್ದಾರೆ‌. ಹೋಗಿ ಉತ್ತರ ಕೊಡಲಾಗುವುದು ಎಂದರು.‌

ಜಿಲ್ಲೆಯಲ್ಲಿ ಜೆಡಿಎಸ್ ನ‌ ಮುಗಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಮಲ ಅರಳಿಸಲು ವ್ಯವಸ್ಥಿತ ಸಂಚು‌ ಮಾಡುತ್ತಿದ್ದಾರೆ. ಇದಕ್ಕಾಗಿ ಐಟಿ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಎಸಿಬಿ ದಾಳಿ ಬಗ್ಗೆ ಬಾಯ್ಬಿಟ್ಟ ಪುಟ್ಟರಾಜು, ಚುನಾವಣೆ ಮುಗಿಯಲಿ. ನಾವೂ ತೋರಿಸುತ್ತೇವೆ ಎಂದು ಗುಡುಗಿದರು.

ನಾವು ನಿಖಿಲ್ ನಾಮಪತ್ರ ಸಲ್ಲಿಸಲು ಯಾವುದೇ ಜನರನ್ನು ಕರೆತಂದಿಲ್ಲ. ಅದೆಲ್ಲ ನಮ್ಮ ವಿರೋಧಿಗಳು ಮಾಡುತ್ತಿರೋದು. ಅದನ್ನು ನಾವು ದಾಖಲೆ ಸಮೇತ ಕೆಲವೇ ದಿನಗಳಲ್ಲಿ ಮುಂದಿಡುತ್ತೇವೆ. ಸುಮಲತಾ ಬಗ್ಗೆ ತಿಳಿಸಲು ಬೇಹುಗಾರಿಕೆಗೆ ಅಧಿಕಾರಿಗಳು ಬೇಕಿಲ್ಲ. ಸುಮಲತಾರನ್ನು ಗಮನಿಸಲು ಎಲ್ಲೆಡೆ ನಮ್ಮ ಹುಡುಗರು ಇದ್ದು, ಅವರೇ ಸಾಕು ಎಂದು ಪುಟ್ಟರಾಜು ಟಾಂಗ್​ ಕೊಟ್ಟರು.

ನಿಖಿಲ್ ನಾಮಪತ್ರ ಗೊಂದಲ ವಿಚಾರವಾಗಿ ಆ ರೀತಿ ಏನೂ ನಡೆದಿಲ್ಲ. ಇದೆಲ್ಲ ವಿರೋಧಿಗಳ ಕುತಂತ್ರ ಅಷ್ಟೆ. ಅದನ್ನು ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಈ ವಿಚಾರವನ್ನು ಇಷ್ಟೊಂದು ದೊಡ್ಡದು ಮಾಡುತ್ತಿದ್ದಾರೆ. ಕೈಲಾಗದವರು ಮೈ ಪರಿಚಿಕೊಳ್ಳುತ್ತಿದ್ದಾರೆ ಅನ್ನೋ ಮೂಲಕ ಸುಮಲತಾ ನಡೆಗೆ ವ್ಯಂಗ್ಯವಾಡಿದರು.

ಈಗಾಗಲೇ ನಾಮಪತ್ರ ಪರಿಶೀಲನೆ ಎಲ್ಲಾ ಮುಗಿಸಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಇನ್ನು ಏನೇ ಇದ್ದರೂ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅತಿ ಹೆಚ್ಚು ಅಂತರದಿಂದ ನಿಖಿಲ್ ಅವರನ್ನು ಗೆಲ್ಲಿಸುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯವಾಗಿ ಕೈ -ಜೆಡಿಎಸ್ ನಡುವೆ ಸಮನ್ವಯ ಸಾಧಿಸದ ವಿಚಾರವಾಗಿ ಮುಂದಿನ ದಿನದಲ್ಲಿ ಕುಳಿತು ಚರ್ಚಿಸಿ, ಅವರನ್ನು ಮನವೊಲಿಸಿ ಒಟ್ಟಿಗೆ ಕೆಲಸ ಮಾಡಲು ಮುಂದಾಗುತ್ತೇವೆ. ಜಿಲ್ಲೆಯ ಲಕ್ಷ್ಮಿ ಅಶ್ವಿನ್ ಗೌಡಗೆ ಅನ್ಯಾಯವಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಏನೂ ಆಗಿಲ್ಲ. ಮತ್ತೆ ಅವರು ವಾಪಸ್​ ಕೆಲಸಕ್ಕೆ ಸೇರುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಸಚಿವ ಪುಟ್ಟರಾಜು ತಿಳಿಸಿದರು.

ABOUT THE AUTHOR

...view details