ಕರ್ನಾಟಕ

karnataka

ETV Bharat / state

ಕೆ.ಆರ್.ಪೇಟೆಗೆ ಹೆಚ್​ಡಿಕೆಯಿಂದಲೇ ಅನುದಾನ ತಡೆ ಆರೋಪ: ಮಾಜಿ ಸಚಿವರಿಂದ ದಾಖಲೆ ಬಿಡುಗಡೆ!

ಹೆಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​​​ನ ಪ್ರಭಾವಿ ಮುಖಂಡ ಇದರ ದಾಖಲೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಹೆಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

mandya
ಮಾಜಿ ಸಚಿವ ನರೇಂದ್ರ ಸ್ವಾಮಿ

By

Published : Dec 2, 2019, 5:13 PM IST

ಮಂಡ್ಯ:ಹೆಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​​ನ ಪ್ರಭಾವಿ ಮುಖಂಡ ಇದರ ದಾಖಲೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಹೆಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪೇಟೆಗೆ ಅನುದಾನ ತಡೆ ಆರೋಪ: ದಾಖಲೆ ಬಿಡುಗಡೆ ಮಾಡಿದ ಮಾಜಿ ಸಚಿವರು

ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಜಿಲ್ಲೆಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವುಗಳನ್ನು ಬಿಜೆಪಿ ಸರ್ಕಾರ ತಡೆ ನೀಡಿದೆಯೇ ಎಂಬುದರ ಬಗ್ಗೆ ಗೊಂದಲ ಇದೆ. ಆದರೆ ಅಂದು ಘೋಷಣೆ ಮಾಡಿದ ಅನುದಾನ ಕೇವಲ ಸುಳ್ಳಿನ ಅನುದಾನ. ಇನ್ನೂ ಮಿಗಿಲಾಗಿ ಸಿದ್ದರಾಮಯ್ಯ ಕಾಲದಲ್ಲಿ ಜಿಲ್ಲೆಗೆ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದ್ದ 650 ಕೋಟಿ ಅನುದಾನವನ್ನು ಅಂದು ಹೆಚ್‌.ಡಿ.ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್‌ನಿಂದ ಸದಾ ಜಿಲ್ಲೆಗೆ ಮೋಸ ಆಗುತ್ತಿದೆ‌. ಕೆ.ಆರ್.ಪೇಟೆ ಕ್ಷೇತ್ರದ ಹಲವು ಕಾಮಗಾರಿಗಳು ಆ ಲೀಸ್ಟ್‌ನಲ್ಲಿವೆ. ಇವೆಲ್ಲಾ ಸಿದ್ದರಾಮಯ್ಯ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳು‌ ಎಂದು ದಾಖಲೆ ನೀಡಿದರೆ, ಒಂದು ಹೆಜ್ಜೆ ಮುಂದೆ ಹೋದ ಚಲುವರಾಯಸ್ವಾಮಿ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ತಯಾರಿ ಜೊತೆಗೆ ದಾಖಲೆಗಳ ಸಮೇತ ಕ್ಷೇತ್ರಕ್ಕೆ ಹೆಚ್​ಡಿಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details