ಕರ್ನಾಟಕ

karnataka

ETV Bharat / state

ಮಂಡ್ಯ ನೂತನ ಎಸ್​ಪಿಯಾಗಿ ಡಾ.ಸುಮನ್ ಡಿ.ಪನ್ನೇಕರ್ ನೇಮಕ

ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಎಂ.ಅಶ್ವಿನಿ ಅವರನ್ನು ಬೆಂಗಳೂರಿನ ಅಸಿಸ್ಟೆಂಟ್ ಇನ್ಸ್​ಪೆಕ್ಟರ್ ಜನರಲ್ ಆಫ್ ಪೊಲೀಸ್‌ ಕೇಂದ್ರ ಕಚೇರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ವರ್ಗಾವಣೆ ಮಾಡಿದೆ.

dr-suman-d-pannekar-appointed-as-new-sp-of-mandya
ಡಾ.ಎಂ. ಅಶ್ವಿನಿ ವರ್ಗಾವಣೆ.. ಮಂಡ್ಯ ನೂತನ ಎಸ್​ಪಿಯಾಗಿ ಡಾ.ಸುಮನ್ ಡಿ.ಪನ್ನೇಕರ್

By

Published : Oct 21, 2021, 10:11 AM IST

ಮಂಡ್ಯ:ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಎಂ.ಅಶ್ವಿನಿ ಅವರನ್ನು ದಿಢೀರ್​​ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ನೂತನ ಅಧೀಕ್ಷಕಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.

ಡಾ.ಎಂ. ಅಶ್ವಿನಿ ಅವರನ್ನು ಬೆಂಗಳೂರಿನ ಅಸಿಸ್ಟೆಂಟ್ ಇನ್ಸ್​ಪೆಕ್ಟರ್ ಜನರಲ್ ಆಫ್ ಪೊಲೀಸ್‌ ಕೇಂದ್ರ ಕಚೇರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಸಕ್ಕರೆ ನಾಡಿಗೆ ವರ್ಗಾವಣೆಗೊಳಿಸಲಾಗಿದೆ. 2013ರ ಬ್ಯಾಚ್‌ನ ಡಾ.ಸುಮನ್ ಡಿ.ಪನ್ನೇಕ‌ರ್​ ಈ ಹಿಂದೆ ಕೊಡಗು ಎಸ್​ಪಿಯಾಗಿ ಕಾರ್ಯ ನಿರ್ವಹಿಸಿದ್ದರು.

ಆದೇಶ ಪ್ರತಿ

ಕೋವಿಡ್ ಸಮಯದಲ್ಲಿ ಎಸ್‌ಪಿ ಡಾ.ಎಂ.ಅಶ್ವಿನಿಯವರ ನಿವಾಸವನ್ನು ನವೀಕರಣ ಮಾಡಲಾಗಿತ್ತು. ಈ ವೇಳೆ ನಿವಾಸದ ಆವರಣದಲ್ಲಿರುವ ಮರಗಳನ್ನು ನಿಯಮ‌ಬಾಹಿರವಾಗಿ ಕಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಭಾನುವಾರ ಬೆಳಗ್ಗೆ ನಿಖಿಲ್ ಎಂಬಾತ ಎಸ್‌ಪಿ ನಿವಾಸದ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ಕೂಗಾಡಿ ರಂಪಾಟ ಮಾಡಿದ್ದ. ಈ ಸಮಯದಲ್ಲಿ ನಿಖಿಲ್ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರ ಬಗ್ಗೆ ಕಾನ್ಸ್​ಟೇಬಲ್​ ಶಿವಕುಮಾರ್‌ ದೂರು ನೀಡಿದ್ದರೂ ಎಸ್‌ಪಿ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊ೦ಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.

ವರ್ಗಾವಣೆಗೊಂಡ ಡಾ.ಎಂ.ಅಶ್ವಿನಿ

ಈ ಘಟನೆ ಬಳಿಕ ಡಾ.ಎಂ.ಆಶ್ವಿನಿ ಎರಡು ದಿನಗಳ ಕಾಲ ರಜೆ ಹಾಕಿ ಬೆಂಗಳೂರಿಗೆ ತೆರಳಿದ್ದರು. ಅವರು ಮಂಡ್ಯಕ್ಕೆ ಆಗಮಿಸಿದ ಮರುದಿನವೇ ವರ್ಗಾವಣೆ ಆದೇಶ ಹೊರಬಿದ್ದಿದೆ.

ಇದನ್ನೂ ಓದಿ:ಮೈಸೂರಲ್ಲಿ ಭಾರಿ ಮಳೆಗೆ ಹಲವೆಡೆ ಅವಾಂತರ; ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಭೂ ಕುಸಿತ, ಸಂಚಾರ ನಿಷೇಧ

ABOUT THE AUTHOR

...view details