ಕರ್ನಾಟಕ

karnataka

ETV Bharat / state

ಕೆಲಸದ ಒತ್ತಡ: ಆತ್ಮಹತ್ಯೆೆ ಯತ್ನಿಸಿದ ಗ್ರಾಮಲೆಕ್ಕಿಗ - kanandanews

ಕೆಲಸದ ಒತ್ತಡದ ಕಾರಣ ಗ್ರಾಮ ಲೆಕ್ಕಿಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.

ಕೆಲಸದ ಒತ್ತಡ ತಾಳಲಾರದೇ ಗ್ರಾಮ ಲೆಕ್ಕಿಗ ಆತ್ಮಹತ್ಯೆ ಯತ್ನ

By

Published : Jun 21, 2019, 8:21 PM IST

ಮಂಡ್ಯ:ಕೆಲಸದ ಒತ್ತಡ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.

ಕೆಲಸದ ಒತ್ತಡ ತಾಳಲಾರದೇ ಗ್ರಾಮ ಲೆಕ್ಕಿಗ ಆತ್ಮಹತ್ಯೆ ಯತ್ನ

ಗ್ರಾಮ ಲೆಕ್ಕಾಧಿಕಾರಿ ಗೋವಿಂದ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ.

ಹೊನ್ನಲಗೆರೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಗೋವಿಂದ ಶೆಟ್ಟಿ ಅವರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಕೂಡಲೇ ಗಣಕ ಯಂತ್ರದ ನೋಂದಣಿ ಮಾಡಿಸುವಂತೆ ಸೂಚನೆ ನೀಡಲಾಗಿತ್ತು. ಆದ್ರೆ, ಅವರು ಕೆಲಸದ ಒತ್ತಡಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ವಿಷ ಸೇವಿಸಿದ ಗೋವಿಂದ ಶೆಟ್ಟಿಯವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಗೋವಿಂದ ಶೆಟ್ಟಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details