ಮಂಡ್ಯ:ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿಲ್ಲದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಸೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾದ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಯತ್ನ - Mandya latest update news
ಸ್ಥಳೀಯ ನಿವಾಸಿಯೊಬ್ಬ ಮನೆಯ ವಿದ್ಯುತ್ ಬಿಲ್ ಅನ್ನು ಕಳೆದ ಕೆಲವು ತಿಂಗಳಿಂದ ಪಾವತಿಸಿರಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೆಸ್ಕಾಂನ ಲೈನ್‌ಮ್ಯಾನ್ ಮತ್ತು ಬಿಲ್ ಕಲೆಕ್ಟರ್ ಆತನ ಮನೆಗೆ ತೆರಳಿದ್ದಾರೆ. ಈ ವೇಳೆ ಘಟನೆ ನಡೆದಿದೆ.
ವಿದ್ಯುತ್ ಸಂಪರ್ಕ ಕಡಿತ ಮಾಡಲು ತೆರಳಿದ್ದ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಯತ್ನ
ಸೆಸ್ಕಾಂನಲ್ಲಿ ಕೆಲಸ ಮಾಡುವವರಿಗೆ ಜೀವ ಬೆದರಿಕೆ ಇದೆ. ಸರ್ಕಾರಿ ಕೆಲಸದಲ್ಲಿ ಇರುವವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾರ್ವಜನಿಕರು ಹೇಗೆ ವರ್ತಿಸಿದರೂ ಸಹಿಸಿಕೊಂಡು ಸುಮ್ಮನೆ ಇರುವ ಪರಿಸ್ಥಿತಿ ಇದೆ ಎಂದು ಸೆಸ್ಕಾಂ ಸಿಬ್ಬಂದಿ ಅಳಲು ತೋಡಿಕೊಂಡರು.
Last Updated : Dec 23, 2020, 3:26 PM IST