ಮಂಡ್ಯ:ಕಾವೇರಿಗಾಗಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್ ಒಬ್ಬರೆ. ಬೇರೆ ಯಾರಾದರೂ ಆ ಕೆಲಸ ಮಾಡಿದ್ದರೆ ತೋರಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸುಮಲತಾ, ಅವರ ಮಾತುಗಳಿಗೆ ಒಂದು ಸ್ಟ್ಯಾಂಡರ್ಡ್ ಇಲ್ಲ. ಅವರಾಡುವ ಮಾತುಗಳನ್ನ ರಾಜ್ಯದ ಜನ ನೋಡುತ್ತಿದ್ದಾರೆ. ಯಾವತ್ತೂ ಅವರು ಹೆಣ್ಣಿಗೆ ಗೌರವ ಕೊಡುವ ಮಾತುಗಳನ್ನಾಡಿಲ್ಲ. ಆ ಪಕ್ಷದವರ ಬಾಯಲ್ಲಿ ಒಳ್ಳೆಯ ಮಾತುಗಳೇ ಇಲ್ಲ. ಹೀಗೆ ಮಾತನಾಡುತ್ತಾ ಜನರಲ್ಲಿ ಕೀಳು ಮಟ್ಟದ ಅಭಿಪ್ರಾಯವನ್ನ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ಹೆಸರು ಉಲ್ಲೇಖಿಸದೆ ಟೀಕಿಸಿದರು.