ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಸನ್ನಿ​ ಹುಟ್ಟುಹಬ್ಬ.. ರಕ್ತದಾನ ಶಿಬಿರ, ಭರ್ಜರಿ ಬಾಡೂಟ ಹಂಚಿದ ಅಭಿಮಾನಿಗಳು! - ಮಂಡ್ಯದಲ್ಲಿ ಬಾಡೂಟ ಹಂಚಿ ಸನ್ನಿ ಲಿಯೋನ್​ ಹುಟ್ಟುಹಬ್ಬ ಆಚರಣೆ

ಮಂಡ್ಯದಲ್ಲಿ ಅಭಿಮಾನಿಗಳು ಬಾಲಿವುಡ್​​ ನಟಿ ಸನ್ನಿ ಲಿಯೋನ್​​ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.

sunny-leone-birthday-celebration-in-mandya
ಮಂಡ್ಯದಲ್ಲಿ ಸನ್ನಿ​ ಹುಟ್ಟುಹಬ್ಬ.

By

Published : May 13, 2022, 8:27 PM IST

ಮಂಡ್ಯ:ಮಾದಕ ಚೆಲುವೆ, ಬಾಲಿವುಡ್​​ ನಟಿ ಸನ್ನಿ ಲಿಯೋನ್ ಇಂದು 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸಕ್ಕರೆನಾಡಿನ ಅಭಿಮಾನಿಗಳೂ ಕೂಡ ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಬಿರಿಯಾನಿ ಊಟ ಹಂಚುವ ಮೂಲಕ ತಮ್ಮ ನೆಚ್ಚಿನ ನಟಿಯ ಜನ್ಮದಿನ ಆಚರಿಸಿದ್ದಾರೆ.

ಮಂಡ್ಯ ನಗರದಲ್ಲಿರುವ ಡಿಕೆ ಚಿಕನ್ ಸೆಂಟರ್​ನ ಮಲ್ಲಿಕಾ ಪ್ರಸಾದ್​ ಅವರು ಸಾರ್ವಜನಿಕರಿಗೆ ಬಿರಿಯಾನಿ ಹಂಚಿ, ವಿಶೇಷವಾಗಿ ಹುಟ್ಟಿದ ದಿನ ಆಚರಿಸಿದರು. ಅದೇ ರೀತಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಶೇ. 10ರಷ್ಟು ರಿಯಾಯಿತಿ ದರದಲ್ಲಿ ಚಿಕನ್​ ನೀಡುವ ಮೂಲಕ ವಿಶೇಷತೆ ಮೆರೆದರು.

ಮಂಡ್ಯದಲ್ಲಿ ಸನ್ನಿ​ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಹಾಗೆಯೇ, ಮಂಡ್ಯ ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದಲ್ಲಿ ಹಲವು ಯುವಕರು ಗ್ರಾಮಸ್ಥರು ಸನ್ನಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಬೃಹತ್ ರಕ್ತದಾನ ಶಿಬಿರ ಆಯೋಜನೆ ಹಾಗೂ ಎಲ್ಲರಿಗೂ ಬಾಡೂಟ ವಿತರಿಸುವ ಮೂಲಕ ನಟಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಇದನ್ನೂ ಓದಿ:ಬಾಲಿವುಡ್ 'ಬೇಬಿ ಡಾಲ್'​ಗೆ 41ನೇ ಜನ್ಮದಿನ ಸಂಭ್ರಮ: ಶುಭಾಶಯಗಳ ಮಹಾಪೂರ

For All Latest Updates

ABOUT THE AUTHOR

...view details