ಮಂಡ್ಯ: 16 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 4 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ 16 ಸೋಂಕಿತರ ಪೈಕಿ ನಾಲ್ವರು ಗುಣಮುಖ
ಕೋವಿಡ್ ಭೀತಿಯಲ್ಲಿದ್ದ ಮಂಡ್ಯ ಜಿಲ್ಲೆಯ ಜನರಿಗೆ ಸದ್ಯ ಸಮಾಧಾನದ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಜಿಲ್ಲೆಯಲ್ಲಿದ್ದ 16 ಕೊರೊನಾ ಸೋಂಕಿತರ ಪೈಕಿ 4 ಜನರು ಗುಣಮುಖರಾಗಿದ್ದಾರೆ. ಅಲ್ಲದೆ ಖಚಿತಪಡಿಸಿಕೊಂಡು ಅವರನ್ನು ಬಿಡುಗಡೆಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್
ಕೊರೊನಾ ಆತಂಕದಿಂದ ಕಂಗಾಲಾಗಿದ್ದ ಜಿಲ್ಲೆಯ ಜನರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. 16 ಜನರ ಪೈಕಿ ನಾಲ್ವರು ಗುಣಮುಖರಾಗಿದ್ದಾರೆ. ನಾಲ್ವರನ್ನು 22 ದಿನ ಕ್ವಾರೆಂಟೈನ್ನಲ್ಲಿಡಲಾಗಿದ್ದು, ಪರಿಶೀಲನೆ ಮಾಡಿ ಗುಣಮುಖರಾದ ಬಗ್ಗೆ ಖಚಿತಪಡಿಸಿಕೊಂಡು ಡಿಸ್ಜಾರ್ಜ್ ಮಾಡಲಾಗುವುದು ಡಿಸಿ ತಿಳಿಸಿದ್ದಾರೆ.
ಸದ್ಯ ರೋಗಿಗಳಾದ P171, P172, P173 ಮತ್ತು P184 ಗುಣಮುಖರಾಗಿದ್ದು, ಈಗ ಜಿಲ್ಲೆಯಲ್ಲಿ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 12ಕ್ಕೆ ಇಳಿದಿದೆ.