ಕರ್ನಾಟಕ

karnataka

By

Published : Apr 25, 2020, 8:58 PM IST

ETV Bharat / state

ತಹಶೀಲ್ದಾರ್​ಗೆ ಘೇರಾವ್​ ಹಾಕಿದ ಮಹಿಳೆಯರು: ದಿನಸಿ ಕಿಟ್​ ವಿತರಿಸುವಂತೆ ಒತ್ತಾಯ

ಪಡಿತರ ಕಾರ್ಡ್​ ಹೊಂದಿದವರಿಗೆ ಕೇವಲ ಅಕ್ಕಿ ಮಾತ್ರ ವಿತರಿಸುತ್ತಿದ್ದಾರೆ. ತಹಶೀಲ್ದಾರ್​ ಕಚೇರಿಯಲ್ಲಿ ಸಂಗ್ರಹಿಸಿರುವ ದಿನಸಿ ಕಿಟ್​ಗಳನ್ನು ನೀಡುವಂತೆ ಮಹಿಳೆಯರು ಒತ್ತಾಯಿಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.

woman's Insist on grocery delivery
ತಹಶೀಲ್ದಾರ್​ಗೆ ಘೇರಾವ್​ ಹಾಕಿದ ಮಹಿಳೆಯರು

ಕುಷ್ಟಗಿ: ಪಡಿತರ ಫಲಾನುಭವಿಗಳಿಗೆ ಅಕ್ಕಿ ಮಾತ್ರ ಸಿಕ್ಕಿದ್ದು, ಉಪ್ಪು, ಎಣ್ಣೆ, ಸಕ್ಕರೆ ದಿನಸಿ ಪದಾರ್ಥ ನೀಡುವಂತೆ ಒತ್ತಾಯಿಸಿ ಇಲ್ಲಿನ 22 ಹಾಗೂ 23ನೇ ವಾರ್ಡ್​ ಮಹಿಳೆಯರು ಏಕಾಏಕಿ ತಹಶೀಲ್ದಾರ್​ ವಾಹನಕ್ಕೆ ಘೇರಾವ್​ ಹಾಕಿದ ಘಟನೆ ನಡೆದಿದೆ.

ತಹಶೀಲ್ದಾರ್​ ಎಂ.ಸಿದ್ದೇಶ

ಕಚೇರಿಯಿಂದ ತಹಶೀಲ್ದಾರ್​ ಎಂ.ಸಿದ್ದೇಶ ನಿರ್ಗಮಿಸುವ ವೇಳೆ ವಾಹನ ಸುತ್ತುವರೆದ ಮಹಿಳೆಯರು, ದಿನಸಿ ಕಿಟ್ ವಿತರಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ದಾನಿಗಳು ನೀಡಿರುವ ದಿನಸಿ ಆಹಾರದ ಕಿಟ್​ಗಳನ್ನು ವಿತರಿಸುವಂತೆ ಪಟ್ಟು ಹಿಡಿದರು. ದಾನಿಗಳು ನೀಡಿದ ಕಿಟ್​ಗಳನ್ನು ಕಾರ್ಡ್​ ಇಲ್ಲದವರಿಗೆ ಹಾಗೂ ನಿರ್ಗತಿಕರಿಗೆ ವಿತರಿಸಲಾಗುತ್ತಿದೆ. ದಿನಸಿ ಆಹಾರದ ಕಿಟ್ ಸರ್ಕಾರದಿಂದ ವಿತರಿಸುತ್ತಿಲ್ಲ ಎಂದು ತಹಶೀಲ್ದಾರ್​ ಸ್ಪಷ್ಟಪಡಿಸಿದರು.

ABOUT THE AUTHOR

...view details