ಗಂಗಾವತಿ:ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದ ಮೇರೆಗೆ ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಿಂದ ಕೈಗೊಳ್ಳಲಾಗುತ್ತಿರುವ ಪದವಿ ತರಗತಿಗಳ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆಗಾಗಿ ನಗರಕ್ಕೆ ವಿವಿಯ ಸಿಬ್ಬಂದಿ ತಂಡ ಭೇಟಿ ನೀಡಿತ್ತು.
ಪದವಿ ಪರೀಕ್ಷೆಗಳ ಸಿದ್ಧತೆ ಕುರಿತು ಪರಿಶೀಲಿಸಿದ ಕುಲಸಚಿವ ನೇತೃತ್ವದ ವಿವಿ ತಂಡ - Gangavat latest news
ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಿಂದ ಕೈಗೊಳ್ಳಲಾಗುತ್ತಿರುವ ಪದವಿ ತರಗತಿಗಳ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆಗಾಗಿ ನಗರಕ್ಕೆ ವಿವಿಯ ಸಿಬ್ಬಂದಿ ತಂಡ ಭೇಟಿ ನೀಡಿತ್ತು.
Gangavati
ಪರೀಕ್ಷಾ ವಿಭಾಗ ಹಾಗೂ ಮೌಲ್ಯಮಾಪನ ವಿಭಾಗದ ಕುಲಸಚಿವ ರಮೇಶ ನೇತೃತ್ವದಲ್ಲಿನ ವಿವಿ ಅಧಿಕಾರಿಗಳ ತಂಡ ನಗರದ ಎಚ್.ಆರ್. ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯ ಹಾಗೂ ಕೊಲ್ಲಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಮೇಶ, ವಿಶ್ವ ವಿದ್ಯಾಲಯ ಈಗಾಗಲೇ ಪ್ರಕಟಿಸಿ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ವಿವಿ ವ್ಯಾಪ್ತಿಯಲ್ಲಿನ ನಾನಾ ಜಿಲ್ಲೆಯ ಕಾಲೇಜುಗಳಲ್ಲಿ ಕೈಗೊಳ್ಳಲಾದ ಸಿದ್ಧತೆಯ ಬಗ್ಗೆ ಪರಿಶೀಲಿಸುವ ಉದ್ದೇಶಕ್ಕೆ ಭೇಟಿ ನೀಡಲಾಗುತ್ತಿದೆ ಎಂದರು.