ಗಂಗಾವತಿ:ಹಾಲು ಸಂಗ್ರಹಿಸುವ ಖಾಸಗಿ ಸಂಸ್ಥೆಯೊಂದು ರೈತರಿಂದ ಹಾಲು ಖರೀದಿಸಲು ಹಿಂದೇಟು ಹಾಕಿದ ಪರಿಣಾಮ ಆಕ್ರೋಶಗೊಂಡ ಸಾರ್ವಜನಿಕರು ಹಾಲನ್ನು ಕಾಲುವೆಗೆ ಚೆಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಹೇರೂರು ಗ್ರಾಮದಲ್ಲಿ ನಡೆದಿದೆ.
ಹಾಲು ಖರೀದಿಸಲು ಹಿಂದೇಟು ಹಾಕಿದ ಖಾಸಗಿ ಸಂಸ್ಥೆ: ಕಾಲುವೆಗೆ ಚೆಲ್ಲಿದ ಹೇರೂರು ಗ್ರಾಮಸ್ಥರು!
ಗ್ರಾಮದ ಕೆಲ ಯುವಕರು ಹಾಗೂ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಖಾಸಗಿ ಸಂಸ್ಥೆಯವರು ಹಾಲು ಸ್ವೀಕರಿಸದೇ ಇರುವುದರಿಂದ ಸಂಗ್ರಹಿಸಿದ್ದ ಹಾಲನ್ನು ರೈತರು ಚೆಲ್ಲಿದ್ದಾರೆ.
ಹಾಲು ಖರೀದಿಸಲು ಹಿಂದೇಟು ಹಾಕಿದ ಖಾಸಗಿ ಸಂಸ್ಥೆ, ಕಾಲುವೆಗೆ ಚೆಲ್ಲಿದ ಹೇರೂರು ಗ್ರಾಮಸ್ಥರು..!
ಗ್ರಾಮದ ಜನ ಖಾಸಗಿ ಹಾಲಿನ ಡೈರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಮೀಪದ ತುಂಗಭದ್ರ ಎಡದಂಡೆ ಕಾಲುವೆಗೆ ಹಾಲು ಚೆಲ್ಲಿದ್ದಾರೆ. ಖಾಸಗಿ ಹಾಲು ಸಂಗ್ರಹಕ ಸಂಸ್ಥೆಯೊಂದು ಹಾಲಿನ ಗುಣಮಟ್ಟ ಪರೀಕ್ಷಿಸುವ ಸಾಧನದಲ್ಲಿ ಕೃತಕವಾಗಿ ಹೊಂದಾಣಿಕೆ ಮಾಡಿದ್ದರ ಪರಿಣಾಮ ಹಾಲಿನ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಈ ಹಿನ್ನೆಲೆ ಗ್ರಾಮದ ಕೆಲ ಯುವಕರು ಹಾಗೂ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಖಾಸಗಿ ಸಂಸ್ಥೆಯವರು ಹಾಲು ಸ್ವೀಕರಿಸದೇ ಇರುವುದರಿಂದ ಸಂಗ್ರಹಿಸಿದ್ದ ಹಾಲನ್ನು ರೈತರು ಚೆಲ್ಲಿದ್ದಾರೆ.