ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ಡಿವೈಡರ್​ ಮೇಲೆ ಹತ್ತಿದ ಟ್ರ್ಯಾಕ್ಟರ್: ವಿಡಿಯೋ - Koppala news

ಚಾಲಕ ಶಾರ್ಟ್​ಕಟ್​ ರೂಟ್​ ತೆಗೆದುಕೊಳ್ಳುವಾಗ ಡಿವೈಡರ್​ ಮೇಲೆ ಟ್ರ್ಯಾಕ್ಟರ್​ ಹತ್ತಿದೆ. ಈ ಘಟನೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಟ್ರ್ಯಾಕ್ಟರ್​ ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡು ಪರದಾಡಬೇಕಾಯಿತು.

ಡಿವೈಡರ್​ ಮೇಲೆ ಹತ್ತಿದ ಟ್ರ್ಯಾಕ್ಟರ್
ಡಿವೈಡರ್​ ಮೇಲೆ ಹತ್ತಿದ ಟ್ರ್ಯಾಕ್ಟರ್

By

Published : Aug 21, 2020, 10:06 AM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಹೊರವಲಯದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ - 50ರ ಅಗ್ನಿಶಾಮಕ ಡಿಪೋ ಬಳಿ, ಟ್ರ್ಯಾಕ್ಟರ್​ ಒಂದು ಕ್ರಾಸಿಂಗ್​ ಮಾಡುವಾಗ ಡಿವೈಡರ್​ ಮೇಲೆ ಹತ್ತಿದ ಘಟನೆ ನಡೆದಿದೆ.

ಡಿವೈಡರ್​ ಮೇಲೆ ಹತ್ತಿದ ಟ್ರ್ಯಾಕ್ಟರ್

ಹೆದ್ದಾರಿ ಡಿವೈಡರ್​ಗೆ ಬೈಕ್ ಹೋಗುವಷ್ಟು ಮಾತ್ರ ದಾರಿ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸಿವೆ. ಇನ್ನು ಈ ಭಾಗದಲ್ಲಿ ಯೂ ಟರ್ನ್​ ನಿರ್ಮಿಸಬೇಕು ಎಂದು ಅನೇಕ ಬಾರಿ ವಾಹನ ಸವಾರರು ಮನವಿ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ನಿನ್ನೆ ಟ್ರ್ಯಾಕ್ಟರ್​ ಚಾಲಕ ಶಾರ್ಟ್​ಕಟ್​ ರೂಟ್​ ತೆಗೆದುಕೊಳ್ಳಲು ಈ ದಾರಿಯನ್ನು ಬಳಸಿದ್ದಾನೆ. ಈ ವೇಳೆ, ಡಿವೈಡರ್​ ಮೇಲೆ ಟ್ರ್ಯಾಕ್ಟರ್ ಹತ್ತಿದೆ. ಇನ್ನು ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ABOUT THE AUTHOR

...view details