ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ದೋಟಿಹಾಳ ಶ್ರೀ ಅವಧೂತ ಶುಕಮುನಿ ತಾತಾ ಅಡ್ಡಪಲ್ಲಕ್ಕಿ ಹೊತ್ತ ಭಕ್ತರಿಂದಾಗುತ್ತಿರುವ ಅವಘಡಕ್ಕೆ ತಾಲೂಕಾಡಳಿತ ತಿಲಾಂಜಲಿ ಹಾಕಲು ಯೋಚಿಸಿದೆ.
ಕುಷ್ಟಗಿ: ಅಡ್ಡಪಲ್ಲಕ್ಕಿ ಆಚರಣೆ ನಿಲ್ಲಿಸಲು ಚಿಂತನೆ
ದೋಟಿಹಾಳ ಶ್ರೀ ಅವಧೂತ ಶುಕಮುನಿ ತಾತಾ ಅಡ್ಡಪಲ್ಲಕ್ಕಿ ಆಚರಣೆ ನಿಲ್ಲಿಸಲು ತಾಲೂಕಾಡಳಿತ ಮುಂದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಎಂ.ಸಿದ್ದೇಶ ಅವರು, ಅಡ್ಡಪಲ್ಲಕ್ಕಿ ಹೊತ್ತವರು ದೇವರ ಹೆಸರಿನಲ್ಲಿ ನಡೆಸಿದ ದಾಂಧಲೆ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 50 ಜನರನ್ನು ಬಂಧಿಸಲಾಗಿದೆ. ಇಂಥ ಪ್ರಕರಣ ಮರುಕಳಿಸದಂತೆ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನೇ ರದ್ದುಗೊಳಿಸಲು ಯೋಚಿಸಿದ್ದೇವೆ ಎಂದರು.
ಘಟನೆಯ ವಿವರಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಪ್ರಸ್ತಾಪಿಸಿ ಅಡ್ಡಪಲ್ಲಕ್ಕಿ ರಹಿತ ಆಚರಣೆಗೆ ಕ್ರಮವಹಿಸಲು ಚಿಂತನೆ ನಡೆಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಲು ಸರಳವಾಗಿ ಆರಾಧನಾ ಮಹೋತ್ಸವ ಆಚರಣೆಗೆ ಸೂಚಿಸಿದ್ದರೂ ಈ ಘಟನೆ ಸಂಭವಿಸಿದೆ ಎಂದು ವಿಷಾದಿಸಿದರು.